ತ್ರಿಶೂರ್: ಕೇರಳ ಪೊಲೀಸರು ತಮ್ಮ ಫೇಸ್ ಬುಕ್ ಪೇಜ್ ಮೂಲಕ ಹಂಚಿಕೊಂಡಿರುವ ಮಾಹಿತಿ ಜನಪ್ರಿಯವಾಗುತ್ತಿದೆ. ಇದೀಗ ವಂಚನೆಯ ಹೊಸ ವಿಧಾನದ ಕುರಿತು ಪೊಲೀಸರು ಶೇರ್ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತ್ರಿಶೂರ್‌ನ ಕಾಲೇಜೊಂದರಲ್ಲಿ ಓದುತ್ತಿರುವ ಬಾಲಕಿ ಮಾಡಿದ ತಪ್ಪನ್ನು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ಕರೆಮಾಡಲು ಫೋನ್ ಎರವಲು ಪಡರದು ನಂತರ ಏನಾಗಿದೆ ಎಂದು ಹೇಳುವ ಮೂಲಕ ವ್ಯಕ್ತಿಯೊಬ್ಬ ಹುಡುಗಿಯಿಂದ ಮೊಬೈಲ್ ಫೋನ್ ಪಡೆದು ನಡೆದ ಘಟನೆಯನ್ನು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ಕೇರಳ ಪೊಲೀಸ್ ಟಿಪ್ಪಣಿಯ ಪೂರ್ಣ ಪಠ್ಯ,
ತ್ರಿಶೂರಿನಲ್ಲಿ ನಡೆದ ಘಟನೆ.
ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರು ಕಾಯುತ್ತಿದ್ದರು.
ವ್ಯಕ್ತಿಯೊಬ್ಬನ ಆಗಮನ..... ಇಲ್ಲಿಗೆ ಬರಲು ನನ್ನ ಹೆಂಡತಿ ಹೇಳಿದ್ದಳು. ಅವಳು ಇನ್ನೂ ಬಂದಿಲ್ಲ. ಮನೆಯಿಂದ ಹೊರಟಿರುವೆಯಾ ಅಥವಾ ಇಲ್ಲವೇ? ಎಂದು ಕೇಳಬೇಕಿತ್ತು. ನಿಮ್ಮ ಮೊಬೈಲ್ ಫೋನ್ ಒಮ್ಮೆ ನೀವು ನನಗೆ ನೀಡಬಹುದೇ, ಕೇವಲ ಕರೆ ಮಾಡಲು ಎಂದು ಹುಡುಗಿಯ ಹತ್ತಿರ ಬಂದು ಕೇಳಿದರು.
ಇದು ತುರ್ತು ಎಂದು ಭಾವಿಸಿದ ಹುಡುಗಿ ತನ್ನ ಬ್ಯಾಗ್‌ನಿಂದ ಮೊಬೈಲ್ ಫೋನ್ ತೆಗೆದ ಅವನು ನೀಡಿದ ಫೋನ್ ಸಂಖ್ಯೆಗೆ ಡಯಲ್ ಮಾಡಿದಳು. ನಂತರ ಮಾತನಾಡಲು ಫೋನ್ ಕೊಟ್ಟಳು.
ಅವನು ಅದನ್ನು ತನ್ನ ಕಿವಿಯ ಹತ್ತಿರ ಹಿಡಿದನು. ಆ ಹುಡುಗಿಯಿಮನದ ದೂರ ನಿಂತು ಮೊಬೈಲ್ ಫೋನಿನ ರೇಂಜ್ ಕಡಿಮೆ ಎಂಬಂತೆ ಮಾತನಾಡತೊಡಗಿದ.
ಅತ್ತ ಕಡೆಯವರ ಮಾತು ಕೇಳಿಸಲಾರದವನಂತೆ ಜೋರಾಗಿ ಹಲೋ ಹೇಳಿ ಹುಡುಗಿಯ ಕಣ್ಣಿಂದ ದೂರ ಸರಿದು ಕ್ಷಣಮಾತ್ರದಲ್ಲಿ ಮರೆಯಾದ.
ತಾನು ಮೋಸ ಹೋಗಿದ್ದೇನೆ ಎಂದು ತಿಳಿದು ಬಾಲಕಿ ಅಳಲು ತೋಡಿಕೊಂಡಳು.
ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಬಾಲಕಿ ಅಳುತ್ತಿರುವುದನ್ನು ನೋಡಿದರು. ಅವರು ಅವಳ ಬಳಿಗೆ ಬಂದು ವಿಷಯಗಳನ್ನು ವಿಚಾರಿಸಿದನು. ಪೊಲೀಸ್ ಅಧಿಕಾರಿ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದರು. ಕೂಡಲೇ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಹಸ್ತಾಂತರಿಸಲಾಯಿತು. ನಗರಕ್ಕೆ ಕೇರಳ ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ನಗರದ ಕುರುಪ್ಪಂ ರಸ್ತೆ ಜಂಕ್ಷನ್‌ನಲ್ಲಿ ಕರ್ತವ್ಯ ನಿರತರಾಗಿದ್ದ ಚೇಲಕ್ಕರ ಪೊಲೀಸ್ ಠಾಣೆಯ ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ ಹರಿದಾಸ್ ಅವರು ತಮ್ಮ ಮುಂದೆ ಹೋಗುತ್ತಿದ್ದ ವ್ಯಕ್ತಿಯನ್ನು ಗಮನಿಸಿದರು. ಕಂಟ್ರೋಲ್ ರೂಂನಿಂದ ಮಾಹಿತಿ ಪಡೆದಂತೆ ಕಾಣುವ ವ್ಯಕ್ತಿ ಇದು ಎಂದು ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದರು.
ಆಗಂತುಕ ನೇರವಾಗಿ ಮೊಬೈಲ್ ಫೋನ್ ಅಂಗಡಿಗೆ ತೆರಳುವುದು ಗಮನಕ್ಕೆ ಬಂತು. ಬಾಲಕಿಯಿಂದ ತೆಗೆದುಕೊಂಡಿದ್ದ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದ. ಸಿಮ್ ಕಾರ್ಡ್ ತೆಗೆದು ಸೆಕೆಂಡ್ ಹ್ಯಾಂಡ್ ಮೊಬೈಲ್ ಮಾರಾಟ ಮಾಡುವ ಅಂಗಡಿಗೆ ತೆಗೆದುಕೊಂಡು ಹೋಗುವುದು ಆತನ ಯೋಜನೆಯಾಗಿತ್ತು.
ಆದರೆ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಇದನ್ನು ಅರಿತು ಆತನ ಮೇಲೆ ಕಣ್ಣಿಟ್ಟರು. ಪಕ್ಕದಲ್ಲೇ ಇದ್ದ ಎರಡ್ಮೂರು ಮೊಬೈಲ್ ಅಂಗಡಿಗೆ ಎಡತಾಕುವುದು ಕಂಡು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕದ್ದ ಮೊಬೈಲ್ ಅದೆಂಬುದು ಖಾತ್ರಿಯಾಯಿತು.