ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವಕ್ಕೆ ಶುಕ್ರವಾರ ಧ್ವಜಾರೋಹಣ ನಡೆಯಿತು. ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಪ್ರತಿ ದಿನ ಬೆಳಗ್ಗೆ ಮತ್ತು ರಾತ್ರಿ ಉತ್ಸವಬಲಿ, ಭಜನೆ, 21ರಂದು ನಡುದೀಪೋತ್ಸವ, 22ರಂದು ಕರಂದಕ್ಕಾಡು ಬೆಡಿಕಟ್ಟೆಯಲ್ಲಿ ವಿಶೇಷ ಸುಡುಮದ್ದುಪ್ರದರ್ಶನ ನಡೆಯುವುದು. 23ರಂದು ಬೆಳಗ್ಗೆ 9ಕ್ಕೆ ಶಯನೋದ್ಘಾಟನೆ, ಮಹಾಭಿಷೇಕ, ತುಲಾಭಾರಸೇವೆ, ಉತ್ಸವಬಲಿ, ರಾತ್ರಿ ಕಟ್ಟೆಪೂಜೆ, ಅವಭೃತ ಸನಾನ, ದರ್ಶನಬಲಿ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯುವುದು.