ಕಾಸರಗೋಡು: ಜಿಲ್ಲೆಯ ಎಲ್ಲಾ ಖಾಸಗಿ ಬಸ್‍ಗಳಿಗೆ ಅನ್ವಯ ವಾಗುವ ರೀತಿಯಲ್ಲಿ ಕ್ಯಾಶ್‍ಲೆಸ್ ಟಿಕೆಟ್ ವ್ಯವಸ್ಥೆ 'ಚಲೋಕಾರ್ಡು' ಸೇವೆಗೆ ಕಾಸರಗೋಡಿನಲ್ಲಿ ಚಾಲನೆ ನೀಡಲಾಯಿತು. ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ಜಾಯಿಂಟ್ ಆರ್‍ಟಿಓ ಪದ್ಮಕುಮಾರ್ ಚಲೋ ಕಾರ್ಡು ಸೇವೆಗೆ ಚಾಲನೆ ನೀಡಿದರು.
ಕಾಸರಗೋಡು ಜಿಲ್ಲಾ ಖಾಸಗಿ ಬಸ್ ಓಪರೇಟರ್ಸ್ ಫೆಡರೇಶನ್ ಅಧ್ಯಕ್ಷ ಕೆ.ಗಿರೀಶ್, ತಾಲೂಕು ಸಮಿತಿ ಕಾರ್ಯದರ್ಶಿ ಸಿ.ಎ ಮಹಮ್ಮದ್‍ಕುಞÂ, ಚಲೋ'ದ.ಭಾರತ ಮುಖ್ಯಸ್ಥ ವಿಜಯ್ ಮೆನನ್, ಮನು ನಾಯರ್ ಉಪಸ್ಥಿತರಿದ್ದರು.
ಚಲೋ ಟ್ರಾವೆಲ್ ಕಾರ್ಡಿನೊಂದಿಗೆ ಕಾಸರಗೋಡಿನಲ್ಲಿ ಇನ್ನು ಮುಂದೆ ಕ್ಯಾಶ್‍ಲೆಸ್ ಟಿಕೆಟಿಂಗ್ ಸೇವೆ ಸಾಧ್ಯವಾಗಲಿದ್ದು, ಜಿಲ್ಲೆಯ ನೂರಕ್ಕೂ ಹೆಚ್ಚು ಬಸ್‍ಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಚಲೋ ಕಾರ್ಡು ಬಳಸುವವರಿಗೆ ಶೇ.10ರ ರಿಯಾಯಿತಿಯೂ ಲಭ್ಯವಾಗಲಿದೆ.
ಚಲೋಕಾರ್ಡು ಬಳಸುವವರಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್‍ಗಳಿಗೆ ಸ್ಟಿಕ್ಕರ್‍ಗಳನ್ನು ಲಗತ್ತಿಸಲಾಗುತ್ತದೆ. ಒಂದು ಬಾರಿ 30ರೂ. ಪಾವತಿಸಿ ಚಲೋ ಕಾರ್ಡು ಪಡೆದುಕೊಂಡರು.