ಪೆರ್ಲ: ಟೀಚರ್ಸ್ ಸ್ಪೋಟ್ರ್ಸ್ ಕೌನ್ಸಿಲ್ ನೇತೃತ್ವದಲ್ಲಿ ಎರಡು ದಿವಸದ ಅಂಡರ್ ಆರ್ಮ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್_3 ಪೆರ್ಲ ಬಜಕುಡ್ಲು ಮೈದಾನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆಎಸ್ ಉದ್ಘಾಟಿಸಿ ಮಾತನಾಡಿ ಅಧ್ಯಾಪಕರು ಕೇವಲ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ಕ್ರೀಡಾ ಕ್ಷೇತ್ರ ಕೂಡ ಪೆÇ್ರೀತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಟೀಚರ್ಸ್ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಉದಯ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಬಜಕ್ಕೂಡ್ಲು ಮಾಲಿಂಗೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಶಾನುಭೋಗ್, ಬಜ ಕೂಡ್ಲು ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ ನ ಅಧ್ಯಕ್ಷ ಸುಜಿತ್ ರೈ ಶುಭಾಶಂಸನೆಗೈದರು. ಕಾರ್ಯದರ್ಶಿ ರಘುವೀರ್ ರಾವ್ ಸ್ವಾಗತಿಸಿ, ಸದಸ್ಯ ನಿರಂಜನ್ ರೈ ಪೆರಡಾಲ ನಿರೂಪಿಸಿದರು. ಪ್ರದೀಪ್ ಶೆಟ್ಟಿ ವಂದಿಸಿದರು. ಸನ್ನಿ ಪೆರ್ಲ, ಕ್ಲಬ್ಬಿನ ಆಟಗಾರ ಶಾಫಿ , ಅಧ್ಯಾಪಕ ಪ್ರವೀಣ್ ಅಡಿಗ ಬಹುಮಾನ ವಿತರಿಸಿದರು. ಟೀಚರ್ ಸ್ಪೋಟ್ರ್ಸ್ ಕೌನ್ಸಿಲ್ ನ ಗೌರವ ಸಲಹೆಗಾರ ಮಾಲಿಂಗೇಶ್ವರ ಭಟ್ ಪೆರ್ಲ, ಸದಾಶಿವ ಮಾಸ್ತರ್, ಕೋಶಾಧಿಕಾರಿ ಅಶೋಕ್ ಕೊಡÉ್ಮೂಗರು, ರಫೀಕ್ ಮಾಸ್ತರ್ ಉಪಸ್ಥಿತರಿದ್ದರು. ಮಾಸ್ತರ್ ಸ್ಟ್ರೈಕರ್ಸ್ ಕಾಸರಗೋಡು ಪ್ರಥಮ , ರಾಯಲ್ ಟೀಚರ್ಸ್ ಕಾಸರಗೋಡು ದ್ವಿತೀಯ, ಟೀಚರ್ಸ್ ಆರ್ಮಿ ಕಾಸರಗೋಡು ತೃತೀಯ, ಡೈನಾಮಿಕ್ ಟೀಚರ್ಸ್ ನಾಲ್ಕನೇ ಸ್ಥಾನ ಗಳಿಸಿತು.