ತಿರುವನಂತಪುರ: ರಾಜ್ಯದ ಪ್ಲಸ್ ಟು ಪರೀಕ್ಷಾ ವೇಳಾಪಟ್ಟಿಯನ್ನು ಮರುನಿಗದಿಗೊಳಿಸಲಾಗಿದ್ದು, ಏಪ್ರಿಲ್ 18ರಂದು ನಡೆಯಬೇಕಿದ್ದ ಇಂಗ್ಲಿಷ್ ಪರೀಕ್ಷೆಯನ್ನು ಏಪ್ರಿಲ್ 23ಕ್ಕೆ ಮುಂದೂಡಲಾಗಿದೆ. 20ರಂದು ನಡೆಯಬೇಕಿದ್ದ ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರ ಪರೀಕ್ಷೆಗಳು 26ರಂದು ನಡೆಯಲಿದೆ. ಜೆಇಇ ಪರೀಕ್ಷೆಯ ಕಾರಣ ಈ ಬದಲಾವಣೆ ಮಾಡಲಾಗಿದೆ. ಇತರೆ ಪರೀಕ್ಷೆಗಳು ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಈ ಹಿಂದೆ ಮಾರ್ಚ್ 22 ರಿಂದ 30 ರವರೆಗೆ ರಾಜ್ಯದ ಶಾಲೆಗಳಲ್ಲಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಬಹಳ ದಿನಗಳ ನಂತರ ಐದರಿಂದ ಒಂಬತ್ತರವರೆಗಿನ ಮಕ್ಕಳಿಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿದುಬಂದಿದೆ.
ಜೊತೆಗೆ ಒಂದರಿಂದ ನಾಲ್ಕನೇ ತರಗತಿಯ ವರೆಗೆ ಪರೀಕ್ಷೆಗಳ ಬದಲಿಗೆ ವರ್ಕ್‍ಶೀಟ್‍ಗಳನ್ನು ನೀಡಲಾಗುತ್ತದೆ.