ಮಧೂರು: ಮಧೂರು ಗ್ರಾಮ ಪಂಚಾಯಿತಿಯ 2021-22ನೇ ಸಾಲಿನ ಯೋಜನೆಯನ್ವಯ ಹಿರಿಯ ನಾಗರಿಕರಿಗೆ ಮಂಚಗಳ ವಿತರಣಾ ಕಾರ್ಯ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ ಮಂಚಗಳ ವಿತರಣಾಕಾರ್ಯಕ್ಕೆ ಚಾಲನೆ ನೀಡಿದರು.
ಉಪಾಧ್ಯಕ್ಷೆ ಸಮಿಜಾ ವಿನೋದ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ಸೂರ್ಲು, ಯಶೋಧ, ಉಮೇಶ್ ಗಟ್ಟಿ, ಗ್ರಾಪಂ ಸದಸ್ಯರಾದ ಹಬೀಬ್ ಚೆಟ್ಟುಂಗುಯಿ, ಉಷಾಸುರೇಶ್, ರಾಧಾ ಪಚ್ಚಕ್ಕಾಡ್, ರತೀಶ್, ಸೌಮ್ಯಾ, ನಸೀರಾ, ಜನನಿ, ಪಂಚಾಯಿತಿ ಕಾರ್ಯದರ್ಶಿ ಗೀತಾಕುಮಾರಿ, ಜತೆ ಕಾರ್ಯದರ್ಶಿ ಪಿ.ವಿ ಥಾಮಸ್, ಐಸಿಡಿಎಸ್ ಕಾರ್ಯದರ್ಶಿ ಕೆ.ಎಂ ದಿಲ್ನಾ ಉಪಸ್ಥಿತರಿದ್ದರು.