ಕೊಚ್ಚಿ: ಕೇರಳದ ಕೊಚ್ಚಿಯಲ್ಲಿರುವ ಟ್ಯಾಟೂ ಕಲಾವಿದನ ವಿರುದ್ಧ ಕೆಲ ಯುವತಿಯರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಟ್ಯೂಟೂ ಕಲಾವಿದ ಸುಜೀಶ್ನ ಕರಾಳ ಮುಖವನ್ನು ಒಂದೊಂದಾಗಿ ಬಿಚ್ಚಿಟ್ಟಿರುವ ಸಂತ್ರಸ್ತೆಯರು ಟ್ಯಾಟೂ ಪಾರ್ಲರ್ನ ಅಕ್ರಮವನ್ನು ಹೊರ ಹಾಕಿದ್ದಾರೆ.
ಆರೋಪಿ ಸುಜಿತ್ ಟ್ಯಾಟೂ ಸೂಜಿಯಿಂದ ಹೆದರಿಸಿ ದೌರ್ಜನ್ಯ ಎಸಗಿದರು ಎಂದು ಸಂತ್ರಸ್ತೆಯೊಬ್ಬಳು ಆರೋಪಿಸಿದರೆ, ವರ್ಷದ ಹಿಂದೆ ಸುಜೀಶ್ ಅತ್ಯಾಚಾರ ಮಾಡಿದ್ದಾರೆ ಎಂದು ಮತ್ತೊಬ್ಬ ಸಂತ್ರಸ್ತೆ ಹೇಳಿದ್ದಾರೆ. ಅಂದಹಾಗೆ ಸುಜೀಶ್ ಟ್ಯೂಟೂ ಪಾರ್ಲರ್ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಟ್ಯಾಟೂ ಕೇಂದ್ರ. ಅಲ್ಲಿಗೆ ಸಿನಿಮಾ ಕಲಾವಿದರು ಸೇರಿ ಅನೇಕ ಸೆಲೆಬ್ರಿಟಿಗಳು ಟ್ಯಾಟೂ ಹಾಕಿಸಿಕೊಳ್ಳಲು ಬರುತ್ತಾರೆ.
ಸಾಮಾಜಿಕ ಜಾಲತಾಣ ವೇದಿಕೆ ರೆಡ್ಡಿಟ್ನಲ್ಲಿ ಮಹಿಳೆಯೊಬ್ಬರು ಸುಜೀಶ್ ಕರ್ಮಕಾಂಡ ವಿವರಿಸಿದ್ದಾರೆ. ಅನೇಕ ಮಹಿಳೆಯರು ಕೂಡ ತಮಗಾದ ಕಹಿ ಅನುಭವವನ್ನು ಹೊರಗಾಕಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳುವಾಗ ನನ್ನ ಖಾಸಗಿ ಅಂಗವನ್ನು ಸ್ಪರ್ಶಿಸಿದ ಸುಜೀಶ್, ನನ್ನನ್ನು ತುಂಬಾ ಬಲವಂತ ಮಾಡಿದರು ಎಂದು ಆರೋಪ ಮಾಡಿದ್ದಾರೆ.
ವ್ಯಕ್ತಿಯೊಬ್ಬರನ್ನು ನೋಡಿ ಟ್ಯಾಟೂ ಹಾಕಿಸಿಕೊಳ್ಳಲು ಸುಜೀಶ್ ಅವರ ಪಾರ್ಲರ್ಗೆ ಹೋದೆ. ಸೊಂಟಕ್ಕೆ ಟ್ಯಾಟೂ ಹಾಕಿಸಿಕೊಳ್ಳಲು ಹೋದೆ. ನನ್ನ ಹಚ್ಚೆ ಮೂಲತಃ ದೇವದೂತರ ರೆಕ್ಕೆಗಳನ್ನು ಹೊಂದಿರುವ ಯೋನಿಯ ಚಿತ್ರವಾಗಿತ್ತು. ಟ್ಯೂಟೂ ಹಾಕುತ್ತಾ ಸ್ವಲ್ಪ ಆಪ್ತವಾಗಿ ಮಾತನಾಡಲು ಆರಂಭಿಸಿದ. ಬಳಿಕ ಆತನ ನಡೆಯಿಂದ ಮುಜುಗರವಾಗಲು ಶುರುವಾಯಿತು. ನೀವು ಲೈಂಗಿಕತೆಯನ್ನು ಇಷ್ಟಪಡುವ ಕಾರಣ ಈ ಹಚ್ಚೆ ಹಾಕಿಸಿಕೊಳ್ಳುತ್ತೀದ್ದೀರಾ? ನೀವು ಕನ್ಯೆಯೇ? ಎಷ್ಟು ಬಾರಿ ಸಂಭೋಗ ಮಾಡಿದ್ದೀರಿ? ಹೊರಗಡೆ ನಿಂತಿರುವುದು ನಿಮ್ಮ ಬಾಯ್ಫ್ರೆಂಡಾ? ಎಂದೆಲ್ಲ ಪ್ರಶ್ನೆಗಳನ್ನು ಕೇಳಿದರು.
ಆತನ ಮಾತಿನಿಂದ ನಾನು ಭಯಭೀತಳಾದೆ. ಇತ್ತ ನನ್ನ ಬೆನ್ನ ಮೂಳೆ ಮೇಲೆ ಆತ ಟ್ಯಾಟೂ ಸೂಜಿಯನ್ನು ಇಟ್ಟಿದ್ದ. ನಾನು ಮುಂದೆ ಬಾಗಿದ್ದೆ. ಇದಾದ ಬಳಿಕ ನನ್ನ ಜೀನ್ಸ್ ಅನ್ನು ಮತ್ತಷ್ಟು ಸಡಿಲಗೊಳಿಸಲು ಆರಂಭಸಿದ. ಇದರೊಂದಿಗೆ ಸರಿಯಾಗಿದೆಯೇ ಎಂದು ಅವನು ಕೇಳಿದನು ಮತ್ತು ನಾನು ಹೌದು ಎಂದು ಹೇಳಿದೆ. ಏಕೆಂದರೆ ಅವನು ಹಚ್ಚೆಯ ಕೆಳಗಿನ ಭಾಗಗಳಿಗೆ ಹೋಗುತ್ತಿದ್ದಾನೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದೆ. ಆದರೆ, ನನ್ನ ಪ್ಯಾಂಟ್ ಅನ್ನು ಕಳಚಿ, ನಂತರ ನನ್ನ ಒಳಉಡುಪಿನ ಬಳಿ ಕೈತಂದು ಏನೇನೋ ಮಾಡಲು ಆರಂಭಿಸಿದ. ಆತ ಗ್ಲೌಸ್ ಧರಿಸಿದ್ದ. ಮುಟ್ಟಾಗಿದ್ದೀರಾ ಎಂದು ಕೇಳಿದ. ನಾನು ಮಾತನಾಡಲಿಲ್ಲ. ಏನಾಗುತ್ತಿದೆ ಎಂಬುದನ್ನು ನೋಡಲು ಸಾಧ್ಯವಾಗಲಿಲ್ಲ. ನಂತರ ನಾನು ಬಾಗಿದಾಗ ಅವನು ನನಗೆ ಹಚ್ಚೆ ಹಾಕಿದನು ಮತ್ತು ಹೆಚ್ಚು ನೋವು ಮಾಡಿದನು. ನಾನು ಒಂದು ಮಾತನ್ನೂ ಮಾತನಾಡಲಿಲ್ಲ. ನಾನು ನಿಲ್ಲಿಸು ಎಂದು ಹೇಳಲಿಲ್ಲ. ನಾನು ಆ ಕ್ಷಣದಲ್ಲಿ ತುಂಬಾ ಮೂರ್ಖಳಾಗಿದ್ದಕ್ಕಾಗಿ ಸ್ಥಳದಲ್ಲೇ ಸಾಯಬೇಕೆಂದು ನಾನು ಭಾವಿಸಿದೆ.
ಇದಾದ ತಕ್ಷಣ ನನ್ನ ಕಡೆ ತಿರುಗಿ ಕಿಸ್ ಮಾಡಿದ ಮತ್ತು ತನ್ನ ಬಟ್ಟೆಯನ್ನು ಕಳಚಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ. ಇದೇ ಸಂದರ್ಭದಲ್ಲಿ ಮನೆಯಿಂದ ಫೋನ್ ಬಂತು ನಾನು ಭಯದಿಂದಲೇ ಮನೆಗೆ ಓಡಿ ಬಂದೆ. ಬರುವಾಗ ಇನ್ನು ಟ್ಯಾಟೂ ಪೂರ್ಣಗೊಂಡಿಲ್ಲ. ಮತ್ತೆ ಮಂಗಳವಾರ ಬಾ ನೀವು ಟ್ಯಾಟೂಗಾಗಿ ಹಣ ಕೊಡಬೇಕಾಗಿಲ್ಲ ಎಂದು ಹೇಳಿದ. ನಿಜಕ್ಕೂ ಹೇಸಿಗೆ ಅನಿಸಿತು ಎಂದು ಸಂತ್ರಸ್ತೆ ಬರೆದುಕೊಂಡಿದ್ದಾರೆ.
ಈ ಘಟನೆಯ ಬಗ್ಗೆ ಸಂತ್ರಸ್ತೆ ವಕೀಲರೊಬ್ಬರ ಬಳಿ ಚರ್ಚಿಸಿದ್ದಾರೆ. ಆದರೆ, ಯಾವುದೇ ಸಾಕ್ಷ್ಯಾಧಾರ ಲಭ್ಯವಿಲ್ಲದ ಕಾರಣ ನ್ಯಾಯ ಸಿಗುವ ಭರವಸೆ ಇಲ್ಲ ಎಂದರು ಎಂದು ಹೇಳಿಕೊಂಡಿದ್ದಾಳೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕರು ತಮ್ಮ ನೋವನ್ನು ಹೇಳಿಕೊಂಡು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.