HEALTH TIPS

ಸ್ಮೋಕಿಂಗ್‌ ಬಿಡಲೇ ಬೇಕೆನ್ನುವವರಿಗಾಗಿ ಮಾತ್ರ ಈ ಟಿಪ್ಸ್!

 ಕೆಲ ಕೆಟ್ಟ ಅಭ್ಯಾಸಗಳೇ ಹಾಗೇ ಪ್ರಾರಂಭದಲ್ಲಿ ತುಂಬಾನೇ ಖುಷಿ ನೀಡುವುದು, ಆದರೆ ಅದು ಚಟವಾಗಿ ಬದಲಾದಾಗ ಅದರಿಂದ ಸಮಸ್ಯೆಯಾಗುತ್ತಿರುವುದು ಅರಿವುಗೆ ಬರುತ್ತೆ, ಆದರೆ ಆ ಚಟದಿಂದ ಹೊರಬರುವುದು ತುಂಬಾನೇ ಕಷ್ಟವಾಗುವುದು, ಅದರಲ್ಲೊಂದು ಧೂಮಪಾನ ಚಟ.

ಧೂಮಪಾನ ಅಭ್ಯಾಸವನ್ನು ಹೆಚ್ಚಿನವರು ಕೆಟ್ಟ ಸಂಗದಿಂದ ಕಲಿಯುತ್ತಾರೆ. ಧೂಮಪಾನಿಗಳಾದ ಫ್ರೆಂಡ್ಸ್‌ ಜೊತೆ ಸೇರಿದಾಗ ಅವರು ಸಿಗರೇಟ್ ಸೇದುವಂತೆ ಆಫರ್ ಮಾಡಬಹುದು.. ಪ್ರಾರಂಭದಲ್ಲಿ ಅವರೇ ನಿಮಗೆ ಆಫರ್ ಮಾಡುತ್ತಾರೆ, ಯಾವಾಗ ನಿಮಗೆ ಧೂಮಪಾನ ಚಟ ಬೆಳೆಯುತ್ತದೆಯೋ ಆಗ ಅವರು ಫ್ರೀಯಾಗಿ ಸಿಗರೇಟ್‌ ಕೊಡುವುದು ನಿಲ್ಲಿಸುತ್ತಾರೆ, ಆಗ ನಾವೇ ಕೊಂಡು ಸೇದಿಸಲಾರಂಭಿಸುತ್ತೇವೆ. ತಮಾಷೆಗೆ, ಖುಷಿಗಾಗಿ ಸೇದಿದ ಧೂಮಪಾನ ಚಟವಾದಾಗ ಚಿಕ್ಕ ಟೆನ್ಷನ್‌ ಆದರೂ ಸಿಗರೇಟ್ ಸಂಖ್ಯೆ ಹೆಚ್ಚುವುದು. ಕೊನೆಗೆ ಹಣ, ನೆಮ್ಮದಿ, ಆರೋಗ್ಯ ಎಲ್ಲವೂ ಹಾಳಾಗುವುದು.

ಧೂಮಪಾನಿಗಳಲ್ಲಿ ಹೆಚ್ಚಿನವರಿಗೆ ಧೂಮಪಾನ ಬಿಡಬೇಕೆಂದು ಅನಿಸುತ್ತಿರುತ್ತದೆ, ಆದರೆ ಬಿಡುವುದು ಕಷ್ಟವಾಗುವುದು, ಕೆಲವರು ಒಂದೆರಡು ದಿನ ಪ್ರಯತ್ನ ಮಾಡಿ ಇನ್ನು ಸಾಧ್ಯವಿಲ್ಲ ಎಂದು ಮತ್ತೆ ಆ ಚಟಕ್ಕೆ ಮರಳುವವರು ತುಂಬಾ ಜನ ಇದ್ದಾರೆ.

ಧೂಮಪಾನ ಬಿಡುವವರಿಗೆ ಹುರಿದುಂಬಿಸಲು, ಧೂಮಪಾನದಿಂದ ಉಂಟಾಗುವ ಅಪಾಯದ ಬಗ್ಗೆ ಅರಿವು ಮೂಡಿಸಲು ಮಾರ್ಚ್ 9ನ್ನು ಧೂಮಪಾನ ನಿಷೇಧ ದಿನವೆಂದು ಆಚರಿಸಲಾಗುವುದು.

ನೀವು ಈ ಕೆಟ್ಟ ಚಟದಿಂದ ಹೇಗಾದರೂ ಹೊರಬೇಕೆಂದು ಬಯಸುವುದಾದರೆ ಈ ಟಿಪ್ಸ್ ಖಂಡಿತ ನಿಮಗೆ ಸಹಾಯ ಮಾಡುತ್ತೆ ನೋಡಿ:

1. ಧೂಮಪಾನ ಬಿಡಲು ದಿನಾಂಕವನ್ನು ನಿಗದಿ ಮಾಡಿ ಧೂಮಪಾನ ಬಿಡಬೇಕೆಂದರೆ ಯೋಚನೆ ಮಾಡಿದ ಕ್ಷಣದಿಂದ ಬಿಟ್ಟರೆ ಸಾಧ್ಯವಾಗದೇ? ಎಂಬ ಪ್ರಶ್ನೆ ಹಲವರಲ್ಲಿ ಇರುತ್ತದೆ, ಆದರೆ ಆ ರೀತಿ ಮಾಡಿದರೆ ನಿಮ್ಮ ಪ್ಲ್ಯಾನ್ ಫ್ಲಾಪ್‌ ಆಗುತ್ತೆ. ಆದ್ದರಿಂದ ಧೂಮಪಾನ ಬಿಡಲು ಒಂದು ದಿನಾಂಕ ನಿಗದಿ ಪಡಿಸಿ, ಅಲ್ಲಿಂದ ಮೊದಲು ಮಾನಸಿಕವಾಗಿ ಸಿದ್ಧರಾಗಿ, ನಿಮ್ಮ ಸಿಗರೇಟ್‌ ಸಂಖ್ಯೆ ಕಡಿಮೆ ಮಾಡುತ್ತಾ ಬನ್ನಿ.

2. ಸಿಗರೇಟ್‌ ಎಳೆಯಲು ನಿಮ್ಮನ್ನು ಪ್ರೇರೇಪಿಸುವ ಅಂಶ ಯಾವುದು? ಕೆಲವೊಂದು ಅಂಶಗಳು ಸಿಗರೇಟ್‌ ಎಳೆಯಲು ಪ್ರೇರೇಪಿಸುತ್ತದೆ. ಮಾನಸಿಕ ಒತ್ತಡ ಅದರಲ್ಲೊಂದು. ನೀವು ಧೂಮಪಾನ ಬಿಡಲು ಮಾನಸಿಕ ಒತ್ತಡವನ್ನು ಹೊರಹಾಕಿ, ಮೊದಲು ಮನಸ್ಸನ್ನು ಖುಷಿಯಾಗಿಡಿ ಹಾಗೂ ಶಕ್ತವಾಗಿಡಿ.

3. ಧೂಮಪಾನ ಬಿಡಲು ಸಹಾಯಕ ವಸ್ತುಗಳನ್ನು ಬಳಸಿ ನೀವು ಧೂಮಪಾನ ಬಿಡಲು ಬಯಸಿದಾಗ ನಿಮ್ಮ ವೈದ್ಯರ ಬಳಿ ಮಾತನಾಡಿ, ಅವರು ನಿಮಗೆ ಕೆಲವೊಂದು ಸಲಹೆ ನೀಡುತ್ತಾರೆ, ಕೆಲವೊಂದು ಔಷಧಿ ನೀಡುವುದು, ಚ್ಯುಯಿಂಗ್‌ಗಮ್‌ ತಿನ್ನಲು ಸಲಹೆ ನೀಡುವುದು, ಇತರ ವಿಧಾನಗಳನ್ನು ಸಲಹೆ ನೀಡುತ್ತಾರೆ. ಅವುಗಳು ನಿಮ್ಮ ಸಿಗರೇಟ್ ಬಯಕೆ ತಡೆಗಟ್ಟಲು ಸಹಕಾರಿಯಾಗಿದೆ.

4. ನೀವು ಸಿಗರೇಟ್‌ ಬಿಡುತ್ತಿದ್ದೀರಿ ಮನೆಯವರಿಗೆ ಅಥವಾ ಫ್ರೆಂಡ್ಸ್‌ಗೆ ಹೇಳಿ ನೀವು ಸಿಗರೇಟ್‌ ಬಿಡಲು ಬಯಸಿದಾಗ ಅದನ್ನು ಸಂಗಾತಿ, ಮನೆಯವರ ಬಳಿ ಹೇಳಿ, ಆಗ ಅವರು ಸಿಗರೇಟ್ ಬಿಡಲು ನಿಮಗೆ ಸಹಾಯ ಮಾಡುತ್ತಾರೆ, ಅಂದರೆ ಅವರು ನಿಮಗೆ ಮಾನಸಿಕವಾಗಿ ಬೆಂಬಲ ನೀಡುತ್ತಾರೆ, ಇದರಿಂದ ಸಿಗರೇಟ್‌ ಬಿಡಬೇಕೆಂಬ ಹಠ ಹೆಚ್ಚುವುದು.

5. ಸೋತರೆ ಮತ್ತೊಮ್ಮೆ ಪ್ರಯತ್ನಿಸಿ ಒಮ್ಮೆ ಧೂಮಪಾನ ಬಿಡಬೇಕೆಂದು ಪ್ರಯತ್ನಿಸಿ ಸೋತರೆ ಅಂದ್ರೆ ಮತ್ತೆ ನೀವು ಸಿಗರೇಟ್‌ ಎಳೆದರೆ ಮತ್ತೊಮ್ಮೆ ಧೂಮಪಾನ ಬಿಡಲು ಟ್ರೈ ಮಾಡಿ ಸಕ್ಸಸ್‌ ಆಗುತ್ತೀರಿ. ಧೂಮಪಾನ ಬಿಡಲು ಮೊದಲು ನೀವು ಮಾಡಬೇಕಾಗಿರುವುದು ಮನಸ್ಸನ್ನು ಗಟ್ಟಿ ಮಾಡುವುದು, ಅಂದರೆ ಸಿಗರೇಟ್‌ ಎಳೆಯಬೇಕೆಂಬ ಬಯಕೆಯನ್ನು ನಿಯಂತ್ರಿಸುವುದು, ಆಗ ಮಾತ್ರ ಧೂಮಪಾನ ಬಿಡಲು ಸಾಧ್ಯ. ಧೂಮಪಾನ ಬಿಡಬೇಕೆಂದು ಇದ್ದೀರಾ, ಮತ್ಯಾಕೆ ತಡ ಮನಸ್ಸು ನಿಯಂತ್ರಿಸಿ, ಕೆಟ್ಟ ಚಟಕ್ಕೆ ಹೇಳಿ ಗುಡ್‌, ಆಲ್‌ ದಿ ಬೆಸ್ಟ್....





Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries