ಬದಿಯಡ್ಕ: ಮಕ್ಕಳನ್ನು ಪ್ರೀತಿಸುವುದರೊಂದಿಗೆ ಅವರ ಬೆಳವಣಿಗೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಹೆತ್ತವರು ಮುತುವರ್ಜಿವಹಿಸಬೇಕು. ಅವರ ಮೇಲಿನ ಅತಿಯಾದ ವಿಶ್ವಾಸವು ಅವರನ್ನು ತಪ್ಪುದಾರಿಗೆ ಒಯ್ಯಲೂ ಕಾರಣವಾಗಬಹುದು ಎಂಬ ಸತ್ಯವನ್ನು ನಾವು ಅರಿತುಕೊಳ್ಳಬೇಕಿದೆ ಎಂದು ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ವಿನೋದ್ ಕುಮಾರ್ ಎಚ್ಚರಿಸಿದರು.
ಸುರಕ್ಷಾ ಕ್ಲಬ್‍ನ ನೇತೃತ್ವದಲ್ಲಿ ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಜೀವನಾನುಭವಗಳೊಂದಿಗೆ ವೃತ್ತಿ ಬದುಕಿನ ಕಹಿ ಸತ್ಯಗಳನ್ನು ಮನಮುಟ್ಟುವಂತೆ ವಿವರಿಸಿದ ಅವರು ರಕ್ಷಕರನ್ನು ತಮ್ಮ ಜವಾಬ್ದಾರಿ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾದರು.
ಎಳೆಯ ಪ್ರಾಯದಲ್ಲೇ ದುಶ್ಚಟಗಳಿಗೆ ದಾಸರಾಗಿ ಹೆತ್ತವರನ್ನೂ ಸಂಕಷ್ಟಕ್ಕೆ ಸಿಲುಕಿಸುವ ಪ್ರಕರಣಗಳು ಇತ್ತೀಚೆಗೆ ಅತಿಯಾಗುತ್ತಿದ್ದು, ಅನೇಕ ಸಂದ`ರ್Àಗಳಲ್ಲಿ ಇದಕ್ಕೆ ಹೆತ್ತವರ ನಿರ್ಲಕ್ಷ್ಯವೇ ಎದ್ದು ಕಾಣುತ್ತಿರುವುದು ಖೇದಕರ ವಿಚಾರವಾಗಿದೆ. ಮಕ್ಕಳ ನಡೆ ನುಡಿಯನ್ನು ಎಳವೆಯಲ್ಲಿ0iÉುೀ ಗುರುತಿಸಿ ತಪ್ಪನ್ನು ತಿದ್ದಬೇಕಾಗಿರುವುದು ಹೆತ್ತವರ ಜವಾಬ್ದಾರಿಯಾಗಿದೆ. ಬಹಳ ಎಚ್ಚರಿಕೆಯಿಂದ ಹಾಗೂ ಅತೀ ಸೂಕ್ಷ್ಮತೆಯಿಂದ ಈ ಕಾರ್ಯವನ್ನು ನಿರ್ವಹಿಸುವಲ್ಲಿ ಹೆತ್ತವರು ಎಡವಬಾರದು ಎಂಬ ಕಿವಿ ಮಾತನ್ನು ಅವರು ಹೇಳಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಿ. ಎಂ.ಖಾಲಿದ್ ಅಧ್ಯಕ್ಷತೆಯಲ್ಲಿ ವಾರ್ಡ್ ಸದಸ್ಯ ಹಾಗೂ ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್ ಉದ್ಘಾಟಿಸಿದರು. ನೌಕರ ಸಂಘದ ಕಾರ್ಯದರ್ಶಿ ಗಣೇಶ ಭಟ್, ಹಿರಿಯ ಅಧ್ಯಾಪಕ ಟಿ.ಓ.ಉಣ್ಣಿಕೃಷ್ಣನ್ ಶುಭ ಹಾರೈಸಿದರು. ಮಾತೃ ಸಂಘದ ಅಧ್ಯಕ್ಷೆ ರೀನಾ ವಿ.ಕ್ರಾಸ್ತ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜೋನ್ ಡಿಸೋಜ, ಪಿಟಿಎ ಉಪಾಧ್ಯಕ್ಷ ಜಯವಿಷ್ಣು ಉಪಸ್ಥಿತರಿದ್ದರು. ಪ್ರಧಾನ ಅಧ್ಯಾಪಕ ವಿ. ವೆಂಕಟರಾಜ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುರಕ್ಷಾ ಕ್ಲಬ್ ಸಂಚಾಲಕ ಎ.ರಾಧಾಕೃಷ್ಣನ್ ಸ್ವಾಗತಿಸಿ, ಎಸ್.ಆರ್.ಜಿ. ಸಂಚಾಲಕ ಕೃಷ್ಣನ್ ನಂಬೂದಿರಿ ವಂದಿಸಿದರು. ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಕೊಡುವ ದತ್ತಿನಿ ಹಾಗೂ ನಗದು ಪುರಸ್ಕಾರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಅಧ್ಯಾಪಕ ಅಬ್ದುಲ್ ಸಲಾಂ ಹಾಗೂ ಶರತ್ ಕುಮಾರ್ ಎಂ. ನಿರೂಪಿಸಿದರು.