ಕಣ್ಣೂರು: ಟೋವಿನೋ ಅವರ ಸಿನಿಮಾ ತಲ್ಲುಮಳ ಶೂಟಿಂಗ್ ಸ್ಥಳದಲ್ಲಿ ಘರ್ಷಣೆ ನಡೆದಿದೆ. ಚಿತ್ರೀಕರಣಕ್ಕೆ ತಡೆಯೊಡ್ಡಿದ ಸ್ಥಳೀಯರು ಚಿತ್ರ ನಿರ್ಮಾಪಕರನ್ನು ದಿಗ್ಬಂಧನಕ್ಕೊಳಪಡಿಸಿದರು.
ತಲ್ಲುಮಳ ಸಿನಿಮಾವನ್ನು ಖಲೀದ್ ರೆಹಮಾನ್ ನಿರ್ದೇಶಿಸಿದ್ದಾರೆ ಮತ್ತು ಟೊವಿನೋ ಥಾಮಸ್ ಮತ್ತು ಶೈನ್ ಟಾಮ್, ಚಾಕೊ, ಕಲ್ಯಾಣಿ ಪ್ರಿಯದರ್ಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮುಹ್ಸಿನ್ ಪರಾರಿ ಮತ್ತು ಅಶ್ರಫ್ ಹಮ್ಜಾ ಅವರು ಸ್ಕ್ರಿಪ್ಟ್ ಬರೆದಿದ್ದಾರೆ, ಚಿತ್ರದಲ್ಲಿ ಲುಕ್ಮಾನ್, ಚೆಂಬನ್ ವಿನೋದ್ ಜೋಸ್, ಜಾನಿ ಆಂಟೋನಿ, ಆಸ್ಟಿನ್ ಮತ್ತು ಅಜೀಮ್ ಜಮಾಲ್ ಕೂಡ ನಟಿಸಿದ್ದಾರೆ. ತಲಶ್ಶೇರಿಯಲ್ಲಿ ಚಿತ್ರೀಕರಣ ಆರಂಭವಾಗಿತ್ತು.
ಚಿತ್ರೀಕರಣದ ಸರಂಜಾಮುಗಳನ್ನು ಸಾಗಿಸುವ ವಿಷಯಕ್ಕೆ ಸಂಬಂಧಿಸಿ ಮೊದಲು ವಾಕ್ಸಮರ ಬಳಿಕ ಸಂಘರ್ಷದಲ್ಲಿ ಪರ್ಯವಸಾನಗೊಂಡಿತೆಂದು ತಿಳಿದುಬಂದಿದೆ. ಸಂಘರ್ಷದ ಕಾರಣ ಚಿತ್ರೀಕರಣ ನಿಲ್ಲಿಸಲಾಯಿತು.