ಕಣ್ಣೂರು: ಪ್ರೊವಿಡೆಂಟ್ ಫಂಡ್ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಶಿಕ್ಷಕಿಯಿಂದ ಲಂಚ ಪಡೆದ ವಿದ್ಯಾಭ್ಯಾಸ ಇಲಾಖೆ ಅಧಿಕಾರಿ ಕಣ್ಣೂರು ವಿಸ್ಮಯ ನಿವಾಸಿ ಸಿ.ಆರ್ ವಿನೋಯ್ ಚಂದ್ರನ್(43)ಎಂಬಾತನನ್ನು ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಸಕ್ತ ಈತ ಸರ್ಕಾರಿ ಎಯ್ಡೆಡ್ ಇನ್‍ಸ್ಟಿಟ್ಯೂಶನ್ ಪ್ರೊವಿಡೆಂಟ್ ಫಂಡ್(ಗೈನ್ ಪಿಎಫ್) ರಾಜ್ಯ ನೋಡೆಲ್ ಅಧಿಕಾರಿ ಹಾಗೂ ಕಾಸರಗೋಡು ವಿದ್ಯಾಭ್ಯಾಸ ಉಪನಿರ್ದೇಶಕರ ಕಚೇರಿಯಲ್ಲಿ ಜ್ಯೂನಿಯರ್ ಸಊಪರಿಂಟೆಂಡೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಕೋಟ್ಟಾಯಂ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಶಿಕ್ಷಕಿಯೊಬ್ಬರ ಪಿಎಫ್ ಲೋಪ ಸರಿಪಡಿಸಲು ಈತ ಲಂಚಕ್ಕೆ ಬೇಡಿಕೆಯೊಡ್ಡಿದ್ದನು. ಶಿಕ್ಷಕಿ ಈತನನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ, ಅನುಚಿತವಾಗಿ ವರ್ತಿಸಿರುವುದಲ್ಲದೆ, ಪಿಎಫ್ ಲೋಪ ಸರಿಪಡಿಸಿಕೊಡಬೇಕಾದರೆ, ತನ್ನನ್ನು ಮುಖತ: ಭೇಟಿಯಾಗುವಂತೆ ಕೇಳಿಕೊಂಡಿದ್ದನು. ಈ ಬಗ್ಗೆ ಶಿಕ್ಷಕಿ ಕೋಟ್ಟಾಯಂನ ವಿಜಿಲೆನ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ಗುರುವಾರ ಬೆಳಗ್ಗೆ 11ಕ್ಕೆ ಕೋಟ್ಟಾಯಂ ರೈಲ್ವೆ ನಿಲ್ದಾಣಕ್ಕೆ ಬರುವಂತೆ ಶಿಕ್ಷಕಿಗೆ ಸೂಚಿಸಿದ್ದ ವಿನೋಯ್‍ಚಂದ್ರ, ತನ್ನ ಅಂಗಿ ಕೊಳೆಯಾಗಿರುವುದರಿಂದ ಹೊಸ ಶರ್ಟ್‍ನೊಂದಿಗೆ ಅಗಮಿಸುವಂತೆ ತಿಳಿಸಿದ್ದನು. ಶಿಕ್ಷಕಿ ವಿಜಿಲೆನ್ಸ್ ಅಧಿಕಾರಿಗಳಿಗೆ ಈ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳೇ ಹೊಸ ಟಿಶರ್ಟ್ ಖರೀದಿಸಿ ಶಿಕ್ಷಕಿ ಕೈಗೆ ಕೊಟ್ಟಿದ್ದರು. ರೈಲ್ವೆ ನಿಲ್ದಾಣದಲ್ಲಿ ಟಿಶರ್ಟ್ ಧರಿಸಿ ಹೋಟೆಲ್ ಕೊಠಡಿಗೆ ಅಗಮಿಸುತ್ತಿದ್ದಂತೆ ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರನೆ ನಡೆಸಿದ್ದರು.