ನವದೆಹಲಿ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕಳೆದ 4 ದಿನಗಳ ಅಂತರದಲ್ಲಿ ಮೂರು ಬಾರಿ ಮಾಡಲಾದ ಇಂಧನ ಬೆಲೆಯೇರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಉಕ್ರೇನ್- ರಷ್ಯಾ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಏರಿಕೆಯಾಗಿದೆ. ಹೀಗಾಗಿ ಅನಿವಾರ್ಯವಾಗಿ ಬೆಲೆಏರಿಸಬೇಕಾಗಿ ಬಂದಿದೆ. ಅಂತಾರಾಷ್ಟ್ರೀಯ ತೈಲ ದರ ನಮ್ಮ ನಿಯಂತ್ರಣದಲ್ಲಿಲ್ಲ ಎಂದು ಗಡ್ಕರಿ ಹೇಳಿದ್ದಾರೆ. ಸ್ವದೇಶದಲ್ಲೇ ತೈಲಕ್ಕೆ ಪರ್ಯಾಯವಾದ ತಂತ್ರಜ್ಞಾನ ಅಭಿವೃದ್ಧಿಪಡಿಸುವುದರಿಂದ ಬೆಲೆಯೇರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಬಹುದು.
ಶೀಘ್ರದಲ್ಲಿ ಭಾರತ 40,000 ಕೋಟಿ ರೂ. ಮೌಲ್ಯದ ಎಥೆನಾಲ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆಯಲಿದೆ. ಆಗ ಇಂಧನಕ್ಕಾಗಿ ವಿದೇಶಗಳನ್ನು ಅವಲಂಬಿಸುವ ಪ್ರಮಾಣ ತಗ್ಗುತ್ತದೆ ಎಂದು ಗಡ್ಕರಿ ಆಶಾವಾದ ವ್ಯಕ್ತಪಡಿಸಿದ್ದಾರೆ.