ನವದೆಹಲಿ: ಸಹಾಯಕ ಪ್ರಾಧ್ಯಾಪಕರಾಗಲು ಪಿಎಚ್‌ಡಿ ಕಡ್ಡಾಯವಾಗಿ ಬೇಕೆಂಬ ನಿಯಮವನ್ನು ತೆಗೆದು ಹಾಕಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿರ್ಧರಿಸಿದೆ. ಯುಜಿಸಿ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕಲಿಸಲು ಕಡ್ಡಾಯವಾಗಿ ಬೇಕಾಗಿರುವ ಪಿಎಚ್‌ಡಿ ಪದವಿಯನ್ನು ತೆಗೆದುಹಾಕುತ್ತಿದೆ.
ನವದೆಹಲಿ: ಸಹಾಯಕ ಪ್ರಾಧ್ಯಾಪಕರಾಗಲು ಪಿಎಚ್‌ಡಿ ಕಡ್ಡಾಯವಾಗಿ ಬೇಕೆಂಬ ನಿಯಮವನ್ನು ತೆಗೆದು ಹಾಕಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿರ್ಧರಿಸಿದೆ. ಯುಜಿಸಿ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕಲಿಸಲು ಕಡ್ಡಾಯವಾಗಿ ಬೇಕಾಗಿರುವ ಪಿಎಚ್‌ಡಿ ಪದವಿಯನ್ನು ತೆಗೆದುಹಾಕುತ್ತಿದೆ.
ವಿಷಯ ತಜ್ಞರ ಸಹಯೋಗದೊಂದಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಸುಧಾರಿಸುವ ಕುರಿತು ದೇಶಾದ್ಯಂತ ವಿವಿಧ ಕೇಂದ್ರೀಯ ವಿಶ್ವವಿದ್ಯಾಲಯಗಳ ಸುಮಾರು 45 ಉಪಕುಲಪತಿಗಳೊಂದಿಗೆ ಸುದೀರ್ಘ ಚರ್ಚೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಯುಜಿಸಿ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಹಾಗೂ ವಿಶೇಷ ಹುದ್ದೆಗಳನ್ನು ಸಹ ಸೃಷ್ಟಿಸಲು ಮುಂದಾಗಿದೆ. ಈ ಹುದ್ದೆಗಳಿಗೆ ಪಿಎಚ್‌ಡಿ ಕಡ್ಡಾಯವಲ್ಲ. ಆದ್ದರಿಂದ ಈ ಹುದ್ದೆಗಳಿಗೆ 'ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್ ಮತ್ತು ಅಸೋಸಿಯೇಟ್ ಪ್ರೊಫೇಸರ್ ಆಫ್ ಪ್ರ್ಯಾಕ್ಟೀಸ್' ಎಂದು ಹೆಸರಿಸುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸಿವೆ.
ಆಯಾ ಕ್ಷೇತ್ರಗಳ ಪರಿಣತರು, ಉದ್ಯಮದ ತಜ್ಞರು ಮತ್ತು ವೃತ್ತಿಪರರನ್ನು ಶಿಕ್ಷಣ ಕ್ಷೇತ್ರದತ್ತ ಸಳೆಯುವ ಕ್ರಮವಾಗಿ ಯುಜಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ. ಈ ಮೂಲಕ ವಿಶ್ವವಿದ್ಯಾಲಯಗಳಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಯುಜಿಸಿ ಮುಂದಾಗಿದೆ ಎಂದೇ ಹೇಳಲಾಗಿದೆ.
ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಕರಾಗಿ ಆಯಾ ಕ್ಷೇತ್ರದ ಪರಿಣಿತರನ್ನು ನೇಮಕ ಮಾಡಿಕೊಳ್ಳಲು ಯುಜಿಸಿ ಚಿಂತನೆ ನಡೆಸಿದೆ. ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಅನುಷ್ಠಾನದ ಅಡಿಯಲ್ಲಿ ಈ ನಿರ್ಧಾರವನ್ನು ಜಾರಿಗೆ ತರಲು ಯೋಜಿಸುತ್ತಿದೆ.
ಈ ಹೊಸ ಹುದ್ದೆಗಳ ಮೂಲಕ ಆಯಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಕೆಲಸ ನಿರ್ವಹಿಸುತ್ತಿರುವ ಪರಿಣಿತರು ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ಅವಕಾಶ ದೊರೆಯಲಿದೆ.
ಇದು ಈಗ ಅಸ್ತಿತ್ವದಲ್ಲಿರುವ ವಿವಿಧ ಹುದ್ದೆಗಳ ಮೇಲೆ ಈ ಹೊಸ ನಿರ್ಧಾರ ಯಾವುದೇ ಪರಿಣಾಮ ಬೀರುವುದಿಲ್ಲ. ಅವರ ನೇಮಕಾತಿಗಳು, ಬಡ್ತಿಗಳು ಮತ್ತು ವೇತನವು ಹಾಗೆಯೇ ಮುಂದುವರಿಯುತ್ತದೆ.