HEALTH TIPS

ಕೆಇಎಫ್ ಹೋಲ್ಡಿಂಗ್ಸ್ ನ ವೆಲ್ ನೆಸ್ ರೆಸಾರ್ಟ್ ಲೋಕಾರ್ಪಣೆ

             ತೇಂಞಿಪ್ಪಾಲಂ: ಕ್ಯಾಲಿಕಟ್ ವಿಶ್ವವಿದ್ಯಾನಿಲಯ ಹತ್ತಿರದ ಚೇಲೇಂಬ್ರದಲ್ಲಿ 30 ಎಕರೆ ಪ್ರದೇಶದಲ್ಲಿ 800 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ವೆಲ್ ನೆಸ್ ರೆಸಾರ್ಟ್‌ನ್ನು ( ಸಮಗ್ರ ಆರೋಗ್ಯ ನಿರ್ವಹಣೆ ಕೇಂದ್ರ) ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ಮತ್ತು ಯುಎಇ ಕೇಂದ್ರೀಕರಿಸಿ ಕಾರ್ಯಾಚರಿಸುವ ಕೆ ಇ ಎಫ್ ಹೋಲ್ಡಿಂಗ್ಸ್ ಚೇರ್‌ಮ್ಯಾನ್ ಫೈಝಲ್ ಇ.

             ಕೊಟ್ಟಿಕೊಲ್ಲನ್ ಜಂಟಿಯಾಗಿ ಲೋಕಾರ್ಪಣೆ ಮಾಡಿದರು. ಎರಡನೇ ಹಂತದ ಯೋಜನೆಯ ಶಿಲಾನ್ಯಾಸವನ್ನೂ ಸಚಿವ ಈ ಸಂದರ್ಭ ನೆರೆವೇರಿಸಿದರು.

               ಬಳಿಕ ಮಾತನಾಡಿದ ಸಚಿವರು, ವೆಲ್ ನೆಸ್ ಟೂರಿಸಂನ ಅನಂತ ಸಾಧ್ಯತೆಗಳಿಗಿರುವ ಪ್ರಥಮ ಹೆಜ್ಜೆ ಇದಾಗಿದ್ದು, ಈ ರೀತಿಯ ವಿವಿಧ ಯೋಜನೆಗಳಿಗೆ ಸರಕಾರ ಮತ್ತು ಟೂರಿಸಂ ಇಲಾಖೆ ಬೆಂಬಲ ನೀಡಲಿದೆ ಎಂದರು.

                   ಭಾರತ ಮತ್ತು ವಿದೇಶದ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಲೋಕಾರ್ಪಣೆ:              ಕಾರ್ಯಕ್ರಮದ ವೇಳೆ ಕೆ ಇ ಎಫ್ ನಿರ್ದೇಶಕಿ ಶಬನಾ ಫೈಝಲ್, ಬಾಲಿವುಡ್ ನಟ ಸುನೀಲ್ ಶೆಟ್ಟಿ, ಕೆ ಇ ಎಫ್ ಹೋಲ್ಡಿಂಗ್ಸ್ ಕ್ಲಿನಿಕಲ್ ಆಪರೇಷನ್ಸ್ ಅಧಿಕಾರಿ ಡಾ. ರವಿ ಪರ್ಹರ್ ಮತ್ತಿತರರು ಮಾತನಾಡಿದರು.

ಸಂಸ್ಥೆಯ ಚೇರ್‌ಮ್ಯಾನ್ ಫೈಝಲ್ ಇ. ಕೊಟ್ಟಿಕೊಲ್ಲನ್ ಮಾತನಾಡಿ, ಆಧುನಿಕ ವೈದ್ಯಶಾಸ್ತ್ರ, ಆಯುರ್ವೇದ ಮತ್ತು ಟಿಬಟ್ಯನ್ ಚಿಕಿತ್ಸಾ ವಿಧಾನ, ಆತ್ಮೀಯ ಕ್ಷೇಮ ಸಮನ್ವಯದ ಚಿಕಿತ್ಸಾ ಕ್ರಮವನ್ನು ಇಲ್ಲಿ ಪರಿಚಯಿಸಲಾಗುತ್ತದೆ. 2023ರ ಮಾರ್ಚ್ ನಲ್ಲಿ ಪ್ರಥಮ ಹಂತದ ಕಾರ್ಯಾಚರಣೆ ಪ್ರಾರಂಭವಾಗಲಿದ್ದು, 2024ರ ಮಾರ್ಚ್ ನಲ್ಲಿ ಪೂರ್ಣ ರೂಪದ ಕಾರ್ಯಾಚರಣೆ ಪ್ರಾರಂಭಗೊಳ್ಳಲಿದೆ. ಮೆಡಿಕಲ್ ವ್ಯಾಲ್ಯೂ ಟೂರೀಸಂ ಮುಖಾಂತರ ವಿವಿಧ ವಿದೇಶೀಯರನ್ನು ಕೇರಳದತ್ತ ಆಕರ್ಷಿಸುವುದು ಯೋಜನೆಯ ಉದ್ದೇಶವಾಗಿದೆ. ಯುಎಇ ಮತ್ತಿತರ ದೇಶಗಳಲ್ಲೂ ಇದೇ ರೀತಿಯ ಕ್ಲಿನಿಕಲ್ ವೆಲ್ನೆಸ್ ರೆಸಾರ್ಟ್‌ಗಳನ್ನು ಸ್ಥಾಪಿಸಲಾಗುವುದು ಎಂದರು.

              ಸಮಗ್ರ ಆರೋಗ್ಯ ಕೇಂದ್ರ, ರೆಸಾರ್ಟ್ ಆಧುನಿಕ ಔಷಧ, ಆಯುರ್ವೇದ, ಟಿಬೆಟಿಯನ್ ವೈದ್ಯಕೀಯ ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ಸಂಯೋಜಿಸುವ ಸೇವೆಗಳು ಈ ರೆಸಾರ್ಟ್‌ನಲ್ಲಿ ಲಭ್ಯವಿದೆ.

        ಮುಖ್ಯವಾಗಿ ಯುರೋಪ್ ಮತ್ತು ಗಲ್ಫ್ ದೇಶಗಳ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಕೆಇಎಫ್ ಹೋಲ್ಡಿಂಗ್ಸ್ ಈ ವೈದ್ಯಕೀಯ ಪ್ರವಾಸೋದ್ಯಮವನ್ನು ಸ್ಥಾಪಿಸುತ್ತಿದೆ. ಕ್ಯಾಲಿಕಟ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಮಲಪ್ಪುರಂ ಜಿಲ್ಲೆಯ ಚೆಲೆಂಬ್ರಾದಲ್ಲಿರುವ ಪ್ರದೇಶದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. 2024 ರ ವೇಳೆಗೆ ಯೋಜನೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಕೆಇಎಫ್‌ ಮೂಲಗಳು ತಿಳಿಸಿದೆ.

            ರೆಸಾರ್ಟ್‌ನ ವಿನ್ಯಾಸವು ಗಾಳಿ, ನೀರು, ಆಹಾರ ಮತ್ತು ಸೂರ್ಯ ಎಂಬ ನಾಲ್ಕು ಅಂಶಗಳನ್ನು ಆಧರಿಸಿದೆ. ಇಂಟಿಗ್ರೇಟೆಡ್ ಕ್ಲಿನಿಕಲ್ ವೆಲ್ನೆಸ್ ರೆಸಾರ್ಟ್ ಈ ರೀತಿಯ ಉದ್ಯಮದಲ್ಲಿ ಮೊದಲನೆಯದು ಎಂದು ಹೇಳಲಾಗುತ್ತದೆ. ವಿವಿಧ ವೈದ್ಯಕೀಯ ತಜ್ಞರ ಜೊತೆಗೆ, ಪುಣೆಯ ವೇದಾಂತ ಅಕಾಡೆಮಿಯ ಸಹಯೋಗವನ್ನೂ ರೆಸಾರ್ಟ್‌ ಹೊಂದಿದೆ.

            ವಿವಿಧ ದೇಶಗಳ ರುಚಿಗಳ ಕೇರಳದಲ್ಲೇ ಅತಿದೊಡ್ಡ ಬಹು-ತಿನಿಸು ರೆಸ್ಟೋರೆಂಟ್ ಅನ್ನು ಕೂಡಾ ಇಲ್ಲಿ ಸ್ಥಾಪಿಸಲಾಗುತ್ತಿದೆ. ಸದ್ಯ ಅದರ ಪ್ರಾಥಮಿಕ ಹಂತದ ಕಾಮಗಾರಿ ಪೂರ್ಣಗೊಂಡಿದೆ.

          ನಿರ್ಮಾಣ ಕ್ಷೇತ್ರದಲ್ಲಿ ಹಲವಾರು ನವೀನ ಬದಲಾವಣೆಗಳನ್ನು ಮಾಡಲು ಹೆಸರುವಾಸಿಯಾಗಿರುವ ಕೆಇಎಫ್ ಹೋಲ್ಡಿಂಗ್ಸ್ ಆಧುನಿಕ ತಂತ್ರಜ್ಞಾನಗಳನ್ನು ರೆಸಾರ್ಟ್‌ಗೆ ತರಲಿದೆ.

               ಇಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇರುವುದಿಲ್ಲ. ಬದಲಾಗಿ, ವಿಕಿರಣ ತಂಪಾಗಿಸುವಿಕೆಯ ಮೂಲಕ ಕಟ್ಟಡಗಳ ಒಳಗಿನ ತಾಪಮಾನವನ್ನು ನಿಯಂತ್ರಿಸುವಂತೆ ಮಾಡಲಾಗುತ್ತದೆ. ಗೋಡೆಗಳು ಮತ್ತು ಮಹಡಿಗಳಲ್ಲಿ ನಿರ್ಮಿಸಲಾದ ಇಪಿಎಸ್ ಪ್ಯಾನಲ್ ಗಳ ಮೂಲಕ ತಂಪಾಗಿಸುವ ಕೊಳವೆಗಳನ್ನು ಅಳವಡಿಸಲಾಗುತ್ತದೆ.

              ಸಂಪೂರ್ಣವಾಗಿ ಸೌರಶಕ್ತಿಯಿಂದ ಚಾಲಿತವಾಗಲಿರುವ ಈ ರೆಸಾರ್ಟ್, ಮಳೆನೀರು ಕೊಯ್ಲು ಮೂಲಕ ನೀರಿನ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಹೊಂದಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries