ಕಾಸರಗೋಡು: ಬಸ್ ಪ್ರಯಾಣದರ ಹೆಚ್ಚಳಕ್ಕೆ ಆಗ್ರಹಿಸಿ ಗುರುವಾರದಿಂದ ಕೇರಳದಾದ್ಯಂತ ಖಾಸಗಿ ಬಸ್‍ಗಳ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಗೊಂಡಿದೆ. ಕೆಎಸ್ಸಾರ್ಟಿಸಿ ಬಸ್‍ಗಳು ಸಂಚಾರ ನಡೆಸುತ್ತಿದ್ದರೂ, ಗ್ರಾಮೀಣ ಪ್ರದೇಶದಲ್ಲಿ ಮುಷ್ಕರ ಹೆಚ್ಚಾಗಿ ಬಾಧಿಸಿದೆ. ಹೆದ್ದಾರಿಗಳಲ್ಲಿ ಸಂಚರಿಸುತ್ತಿರುವ ಕೆಎಸ್ಸಾರ್ಟಿಸಿ ಬಸ್‍ಗಳು ಪ್ರಯಾಣಿಕರಿಂದ ತುಂಬಿಕೊಂಡಿತ್ತು. ಗ್ರಾಮೀಣ ಪ್ರದೇಶದ ಜನತೆ ಆಟೋ, ಟ್ಯಾಕ್ಸಿ ಮೊರೆಹೋಗುತ್ತಿದ್ದಾರೆ. ಒನ್ನೊಂದೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭಗೊಂಡಿದ್ದು, ನಿಗದಿತ ಸಮಯಕ್ಕೆ ಪರೀಕ್ಷಾ ಕೊಠಡಿಗೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಕನಿಷ್ಠ ಪ್ರಯಾಣದರ 8ರೂ,ನಿಂದ 12ಕ್ಕೇರಿಸಬೇಕು, ಕಿಲೋಮೀಟರ್‍ಗೆ 1.10 ರೂ. ಹೆಚ್ಚಳಗೊಳಿಸಬೇಕು, ವಿದ್ಯಾರ್ಥಿ ರಿಯಾಯಿತಿ ದರವನ್ನು ಆರು ರೂ,ಗೇರಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಮುಷ್ಕರ ನಡೆಸಲಾಗುತ್ತಿದೆ.