ಇಡುಕ್ಕಿ: ಎಂಟು ವರ್ಷದ ಬಾಲಕನೊಬ್ಬ ಸೈಕಲ್ ಚಲಾಯಿಸಲು ಲೈಸನ್ಸ್ ಬೇಕೆಂದು ಪೋಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ನೆಡುಂಕಂಡಂನ ನಾಲ್ಕನೇ ತರಗತಿ ವಿದ್ಯಾರ್ಥಿ ದೇವನಾಥ್ ನಾಲ್ಕನೇ ತರಗತಿ ವಿದ್ಯಾರ್ಥಿ.
ಸಾರ್, ಸೈಕಲ್ ಓಡಿಸಲು ನಿಮ್ಮ ಅನುಮತಿ ಬೇಕು, ರಸ್ತೆಯಲ್ಲಿ ಓಡಾಡಲು ಲೈಸನ್ಸ್ ಗೆ ವಿನಮ್ರವಾಗಿ ಅರ್ಜಿ ಸಲ್ಲಿಸುವೆ ಎಂದು ಪುಟಾಣಿ ದೇವನಾಥ್ ನ ಮನವಿಯಾಗಿತ್ತು. ಅರ್ಜಿ ಸಮೇತ ಠಾಣೆಗೆ ಆಗಮಿಸಿದ ದೇವನಾಥ್ ಗೆ ಬಳಿಕ ಪೊಲೀಸರು ಕೈತುಂಬ ಸಿಹಿತಿಂಡಿ ನೀಡಿ ತಂದೆ-ತಾಯಿಯೊಂದಿಗೆ ಕಳಿಸಿದರು.
ಮೂರು ತಿಂಗಳ ಹಿಂದೆ ದೇವನಾಥ್ ನ ಚಿಕ್ಕಪ್ಪ ಸೈಕಲ್ ಖರೀದಿಸಿದ್ದರು. ಲೈಸನ್ಸ್ ಪಡೆದು ಶಾಲೆಗೆ ಸೈಕಲ್ ತುಳಿಯುವ ದೇವನಾಥ್ ಆಸೆಯಿಂದ ಬಾಲಕ ಪೋಲೀಸ್ ಠಾಣೆ ಮೆಟ್ಟಿಲೇರಿದ್ದನು.