HEALTH TIPS

BREAKING: ​ಯೂರೋಪ್‌ನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಷ್ಯಾ ಭಾರೀ ದಾಳಿ!

     ಕೀವ್: ಉಕ್ರೇನ್‌ನಲ್ಲಿರುವ ಯೂರೊಪ್‌ನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಷ್ಯನ್ ಪಡೆಗಳು ಶುಕ್ರವಾರ ಶೆಲ್ ದಾಳಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.

     ರಷ್ಯಾ ಸೇನೆ ಎಲ್ಲೆಡೆಯಿಂದ ಝೆಪೊರಿಝ್ಝಿಯಾ ಅಣುವಿದ್ಯುತ್ ಕೇಂದ್ರದ ಮೇಲೆ ದಾಳಿ ನಡೆಸುತ್ತಿವೆ ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡೈಟ್ರೊ ಕುಲೆಬಾ ಹೇಳಿದ್ದಾರೆ.

     ಪರಮಾಣು ಸ್ಥಾವರಕ್ಕೆ ಈಗಾಗಲೇ ಬೆಂಕಿ ಹತ್ತಿಕೊಂಡಿದ್ದು, ಇದು ಸ್ಫೋಟಗೊಂಡರೆ ಅದು ಚೆರ್ಲೋಬಿಲ್ ದುರಂತದ ಹತ್ತು ಪಟ್ಟು ದೊಡ್ಡ ಸ್ಫೋಟವಾಗಬಹುದು ಎಂದು ಅವರು ಟ್ವೀಟ್ ಮಾಡಿದ್ದಾರೆ.

     ರಷ್ಯಾ ಕೂಡಲೇ ಬೆಂಕಿಯನ್ನು ನಂದಿಸಬೇಕು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭದ್ರತಾ ವಲಯವನ್ನು ಸ್ಥಾಪಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

      ಬೆಂಕಿಯ ಜ್ವಾಲೆ ಮತ್ತು ದಟ್ಟ ಹೊಗೆ ಅಣುವಿದ್ಯುತ್ ಘಟಕ ಹೊಂದಿರುವ ನಗರದಿಂದ ಏಳುತ್ತಿರುವುದು ವಿಡಿಯೊಗಳಿಂದ ಕಂಡುಬರುತ್ತದೆ. ಈ ನಗರ 50 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಧ್ವಂಸವಾದ ಕಾರುಗಳಿಂದ ಜನ ಹೊರಬರುತ್ತಿರುವುದು ಕಾಣಿಸುತ್ತಿದೆ. ಈ ಸಂಘರ್ಷ ಉಕ್ರೇನ್‌ನ 15 ಅಣು ರಿಯಾಕ್ಟರ್‌ಗಳಿಗೆ ಆಕಸ್ಮಿಕ ಹಾನಿ ಮಾಡಬಹುದು ಎಂದು ವಿಶ್ವಸಂಸ್ಥೆಯ ಅಣ್ವಸ್ತ್ರ ಕಣ್ಗಾವಲು ಸಂಸ್ಥೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

      ಈ ನಡುವೆ ಉಕ್ರೇನ್‌ನ ಒಡೆಸಾ, ಬಿಲಾ ಟೆರ್‌ಕ್ವಾ ಮತ್ತು ವೊಲಿನ್ ಒಬ್ಲಾಸ್ಟ್ ಪಟ್ಟಣಗಳ ಮೇಲೆ ವಾಯುದಾಳಿ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

       ನಿವಾಸಿಗಳು ಹತ್ತಿರದ ಶೆಲ್ಟರ್‌ಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾಗಿ ಕೀವ್ ಇಂಡಪೆಂಡೆಂಟ್ ವರದಿ ಮಾಡಿದೆ.

       ನಗರದ ಹೊರವಲಯದಲ್ಲಿ ಉಕ್ರೇನ್ ಪಡೆಗಳು ರಷ್ಯನ್ ಸೈನಿಕರ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಎನೆರ್ಹೊದರ್ ನಗರದ ಮೇಯರ್ ಹೇಳಿದ್ದಾರೆ.

       ಏತನ್ಮಧ್ಯೆ ಚೆರ್ನಿಹಿವ್‌ನಲ್ಲಿ ರಷ್ಯಾ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 33 ಜನರು ಸಾವಿಗೀಡಾಗಿದ್ದು, 18 ಜನರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

          ಪರಮಾಣು ಸ್ಥಾವರದ ಮೇಲಿನ ದಾಳಿ ನಿಲ್ಲಿಸಬೇಕು: ಉಕ್ರೇನ್
       ಉಕ್ರೇನ್‌ನಲ್ಲಿನ ಯುರೋಪ್‌ನ ಅತಿದೊಡ್ಡ ನ್ಯೂಕ್ಲಿಯರ್ ಪವರ್ ಸ್ಟೇಷನ್ ಮೇಲೆ ರಷ್ಯಾ ಸೇನೆ ಶೆಲ್ಲಿಂಗ್ ದಾಳಿ, ಭಾರೀ ಶಸ್ತ್ರಾಸ್ತ್ರ, ಗುಂಡಿನ ದಾಳಿ ನಡೆಸುತ್ತಿದೆ. ಇದನ್ನು ನಿಲ್ಲಿಸಬೇಕೆಂದು ಎನರ್ಹೋಡರ್ ಸ್ಥಾವರದ ವಕ್ತಾರ ಆಂಡ್ರಿ ತುಜ್ ಒತ್ತಾಯಿಸಿದ್ದಾರೆ.

     ಉಕ್ರೇನ್‌ನ ಝಪೊರಿಜ್ಜ್ಯಾ ಪರಮಾಣು ಸ್ಥಾವರದ ಬಳಿ ರಷ್ಯಾದ ಕ್ಷಿಪಣಿ ದಾಳಿಯಿಂದ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಸ್ಥಾವರ ರಕ್ಷಣೆಯಲ್ಲಿದೆ. ಆದರೆ ಅಪಾಯ ಸಂಭವಿಸಿದರೆ ಪರಿಣಾಮ ಭೀಕರವಾಗಿರಲಿದೆ ಎಂದು ಉಕ್ರೇನ್ ಹೇಳಿದೆ.

          ಝೆಲೆನ್​ಸ್ಕಿ ಜತೆ ಬೈಡೆನ್ ಮಾತುಕತೆ

      ಉಕ್ರೇನ್‌ನ ಜಫೋರಿಝಿಯಾದ ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ ಮಾಡಿರುವ ಸಂಬಂಧ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಜತೆ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಮಾತನಾಡಿದ್ದಾರೆ.

      ದೂರವಾಣಿ ಕರೆ ಮಾಡಿ ಮಾತನಾಡಿರುವ ಜೋ ಬೈಡೆನ್, ಸೈನ್ಯ, ಆರ್ಥಿಕ, ಮಾನವೀಯ ಸಹಾಯದ ಬಗ್ಗೆ ಚರ್ಚಿಸಿದ್ದಾರೆ. ಚರ್ಚೆ ಬಳಿಕ ಬಾಂಬ್ ದಾಳಿ ನಿಲ್ಲಿಸಲು ರಷ್ಯಾಗೆ ಮನವಿ ಮಾಡಿದ್ದಾರೆ.

      ಉಕ್ರೇನ್ ಅಧ್ಯಕ್ಷರ ಆಕ್ರೋಶ
ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾ ದಾಳಿ ನಡೆಸಿರುವುದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ರಷ್ಯಾದಿಂದ ಪರಮಾಣು ಭಯೋತ್ಪಾದನೆ ನಡೆಸಲಾಗುತ್ತಿದ್ದು, ಚೆರ್ನೋಬಿಲ್ ದುರಂತ ಪುನರಾವರ್ತಿಸಲು ರಷ್ಯಾ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries