HEALTH TIPS

ಹೊಸ ತಲೆಮಾರು ಮಹಾತ್ಮಾ ಗಾಂಧೀಯ ಬಗ್ಗೆ ಕಲಿಯಬೇಕು: ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ: ಆಝಾದಿಕಾ ಅಮೃತ ಮಹೋತ್ಸವ ಚಿತ್ರ ರದರ್ಶನ ಉದ್ಘಾಟಿಸಿ ಅಭಿಮತ

   

        ಮುಳ್ಳೇರಿಯ: ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಮಹಾತ್ಮ ಗಾಂಧೀಜಿ ಹಾಗೂ ಅವರ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪೋಲೀಸ್ ವರಿಷ್ಠ ಡಾ.ವೈಭವ್ ಸಕ್ಸೇನಾ ಹೇಳಿದರು.

           ಆಜಾದಿ ಕಾ ಅಮೃತ ಮಹೋತ್ಸವದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭದ ಅಂಗವಾಗಿ ಕರ್ಮಂತೋಡಿಯ ಕಾರಡ್ಕ  ಬ್ಲಾಕ್ ಪಂಚಾಯತಿ ಪ್ರಾಂಗಣದಲ್ಲಿ ಬುಧವಾರ ಬೆಳಿಗ್ಗೆ ಪ್ರವಾಸಿ ಕುಂಚ ಚಿತ್ರಕಲೆ ಮತ್ತು ಇತಿಹಾಸ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

          ಹಿಂದೆಲ್ಲ ಶಿಕ್ಷಣ ವ್ಯವಸ್ಥೆಯ ಭಾಗವಾಗಿ ಮಹಾತ್ಮ ಗಾಂಧಿಯವರು ದೇಶಕ್ಕೆ ನೀಡಿದ ಕೊಡುಗೆಯ ಬಗ್ಗೆ ಸಮಥರ್| ಪ|ಠ್ಯಗಳಿದ್ದವು. ಆದರೆ ಹೊಸ ತಲೆಮಾರು ಸ್ವಾತಂತ್ರ್ಯ ಹೋರಾಟದ ಇತಿಹಾಸಕ್ಕೆ ಸಾಕಷ್ಟು ಮಹತ್ವ ನೀಡುತ್ತಿಲ್ಲ. ಹೊಸ ತಲೆಮಾರಿಗೆ ಗಾಂಧೀಜಿಯಂತಹವರನ್ನೂ ಟೀಕಿಸುವುದು ಸುಲಭ. ಸ್ವಾತಂತ್ರ್ಯ ಹೋರಾಟದ ಕಾಲವನ್ನು ಗುರುತಿಸಬೇಕು.ಅಹಿಂಸಾ ಪರಿಕಲ್ಪನೆ ಮೂಲಕ ಹೊಸ ಹೋರಾಟ ಹಾದಿಯನ್ನು ತೋರಿಸಿಕೊಟ್ಟವರು ಗಾಂಧಿ. ಗಾಂಧಿ ಚಿಂತನೆಗಳನ್ನು ಅಳವಡಿಸಿಕೊಂಡರೆ ದೇಶದಲ್ಲೇ ದೊಡ್ಡ ಬದಲಾವಣೆಗಳನ್ನು ಸೃಷ್ಟಿಸಬಹುದು. ಸಮಾಜದಲ್ಲಿ ಹಲವಾರು ಸಮಸ್ಯೆಗಳಿರುವುದರಿಂದ ಹೆಚ್ಚಿನ ಗಮನ ಹರಿಸಬೇಕಾದ ಸಮಯವಿದು. ಎಲ್ಲ ಅನೈತಿಕ ಚಟುವಟಿಕೆಗಳು ನಿಲ್ಲಬೇಕು ಅದಕ್ಕಾಗಿ ಇತಿಹಾಸ ಅರಿಯಬೇಕು ಎಂದರು. 

            ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ.ನಾರಾಯಣನ್, ಸ್ಮಿತಾ ಪ್ರಿಯರಂಜನ್, ಪಿ.ಸವಿತಾ, ಕಾರಡ್ಕ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಮಹಮ್ಮದ್ ನಾಸರ್, ಬ್ಲಾಕ್ ಪಂಚಾಯಿತಿ ಸದಸ್ಯರಾದ ಎನ್.ಯಶೋದಾ, ಕೆ.ನಳಿನಿ ಉಪಸ್ಥಿತರಿದ್ದರು. ಚಿತ್ರಕಲಾವಿದರಾದ ಚಂದ್ರನ್ ಮಟ್ಟುಮ್ಮಲ್ ಮತ್ತು ಶೈಜು ಕೆ ಮಾಲೂರ್. ವಿಪಿನ್ ಇರಿಟ್ಟಿ ಮಾತನಾಡಿ, ಜಿಲ್ಲಾ ವಾರ್ತಾಧಿಕಾರಿ ಎಂ ಮಧುಸೂದನನ್ ಸ್ವಾಗತಿಸಿ, ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಶೀಬಾ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries