ನವದೆಹಲಿ: ಸೆಂಟ್ರಲ್ ಯೂನಿವರ್ಸಿಟಿಗಳ ಯುಜಿ ತರಗತಿಗಳಿಗೆ ಇನ್ನುಮುಂದೆ ವಿದ್ಯಾರ್ಥಿಗಳು ಕಾಮನ್ ಪ್ರವೇಶ ಪರೀಕ್ಷೆಯನ್ನು(ಅUಇಖಿ) ಬರೆದೇ ದಾಖಲಾಗಬೇಕು ಎಂದು ಯುಜಿಸಿ ಚೇರ್ಮೆನ್ ಜಗದೀಶ್ ಕುಮಾರ್ ಹೇಳಿದ್ದಾರೆ.
ಈ ವರ್ಷದ ಜುಲೈನಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ಯುಜಿ ತರಗತಿ ದಾಖಲಾತಿಗೆ ವಿದ್ಯಾರ್ಥಿಗಳು 12ನೇ ತರಗತಿಯಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ.
ಯುಜಿ ತರಗತಿ ದಾಖಲಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಎಪ್ರಿಲ್ ಮೊದಲ ವಾರದಿಂದ ಶುರುವಾಗುವುದು ಎಂದು ಜಗದೀಶ್ ಕುಮಾರ್ ತಿಳಿಸಿದ್ದಾರೆ. 2022-23 ಶೈಕ್ಷಣಿಕ ವರ್ಷದಲ್ಲಿ ಯುಜಿ ಮತ್ತು ಪಿಜಿ ತರಗತಿ ದಾಖಲಾತಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಅUಇಖಿ ಪರೀಕ್ಷೆ ಕೈಗೊಳ್ಲಲಿದೆ.
CUET ಪ್ರವೇಶ ಪರೀಕ್ಷೆಯನ್ನು 12ನೇ ತರಗತಿಯ ಸಿಲಬಸ್ ಆಧಾರದಲ್ಲಿ ರೂಪಿಸಲಾಗುವುದು ಎಂದು ಯುಜಿಸಿ ತಿಳಿಸಿದೆ. ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಯಾವುದಾದರೂ ಭಾಷೆಯನ್ನು ಅಭ್ಯರ್ಥಿ ಆರಿಸಿಕೊಳ್ಳಬಹುದು.