HEALTH TIPS

ಎಡೆಕ್ಕಾನದಲ್ಲಿ ಮುಳ್ಳೇರಿಯ ಮಂಡಲ ಸಭೆ, ಏ.16ರ ಪಾಕಮೇಳ ಯಶಸ್ಸಿಗೆ ಕರೆ

           ಕುಂಬಳೆ: ಮುಳ್ಳೇರಿಯಾ ಹವ್ಯಕ ಮಂಡಲ ಸಭೆ  ಗುಂಪೆ ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಇವರ "ಸುಖನಿ" ನಿವಾಸದಲ್ಲಿ ಜರಗಿತು.  ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಮಂಡಲಾಧ್ಯಕ್ಷ  ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಅಧ್ಯಕ್ಷತೆ ವಹಿಸಿದ್ದರು. ಶಿಷ್ಯಬಾಂಧವರು ಸಾಮೂಹಿಕ ಶಿವಮಾನಸ ಸ್ತೋತ್ರ ಪಠಿಸಿದರು. ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಸ್ವಾಗತಿಸಿ ಜನವರಿ ತಿಂಗಳ ಸಭೆಯ ವರದಿ ನೀಡಿದರು. ಗುರುವಂದನೆ, ಬಿಂದುಸಿಂಧು, ಬೆಳೆ ಸಮರ್ಪಣೆ, ವಿ.ವಿ.ವಿ., ಸೇವಾಸೌಖ್ಯ ಇತ್ಯಾದಿಗಳ ವಿವರಗಳನ್ನು ತಿಳಿಸಲಾಯಿತು. ವಿವಿಧ ವಲಯಗಳಿಂದ ಬಂದ ಪದಾಧಿಕಾರಿಗಳು ತಮ್ಮ ವಲಯದ ಚಟುವಟಿಕೆಗಳ ವಿವರವನ್ನು ಮುಂದಿಟ್ಟರು.

               ವಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಅನುಷ್ಠಾನಗಳು ಅಚ್ಚುಕಟ್ಟಾಗಿ ನಡೆಯುತ್ತಿದ್ದು ಶ್ರೀಮದ್ವಾಲ್ಮೀಕಿ ರಾಮಾಯಣ ಪಾರಾಯಣ, ಶಿವಮಾನಸ ಸ್ತೋತ್ರ ಪಠಣ, ಗಾಯತ್ರೀ ಜಪ, ರುದ್ರ ಪಠಣ ಹಾಗೂ ಪ್ರದೋಷ ರುದ್ರ ಪಠಣ ಶ್ರದ್ಧಾಭಕ್ತಿಯಿಂದ ನಡೆಯುತ್ತಿರುವ ವಿಷಯ ಮನದಟ್ಟು ಮಾಡಲಾಯಿತು.

                 ಸೇವಾಸೌಖ್ಯ ಶೀಘ್ರ ಸಮರ್ಪಣೆಯಾಗಬೇಕಾಗಿರುವುದರಿಂದ ಶ್ರೀರಾಮದೇವರ ಅನುಗ್ರಹ ಪ್ರಾಪ್ತಿಗಾಗಿ 13 ಕೋಟಿ ರಾಮತಾರಕ ಜಪ ಪಠಿಸಲು ಉದ್ದೇಶಿಸಿದ್ದು ಮಂಡಲದ ಗುರಿ 1.5 ಕೋಟಿ ಇದ್ದು ಎಲ್ಲರೂ ಭಾಗವಹಿಸಬೇಕೆಂದು ತಿಳಿಸಲಾಯಿತು. ಹೊಸನಗರದಲ್ಲಿ ರಾಮೋತ್ಸವದ ಸಂದರ್ಭ ನಡೆಯುವ ಮಾತೃ ಸಮಾವೇಶ, ಅದರ ಅಂಗವಾಗಿ ನಡೆಯುವ ಭಜನಾ ಸ್ಪರ್ಧೆ, ಮತ್ತು ಸಾತ್ವಿಕ ಆಹಾರ, ಸಂಸ್ಕಾರ ಉಪನ್ಯಾಸ ವಿಚಾರಗಳನ್ನು ಸಭೆಗೆ ತಿಳಿಸಲಾಯಿತು.

                   ಸೇವಾ ಸಮುಚ್ಚಯದಲ್ಲಿ ಬರುವ ಸೇವಾಸೌಖ್ಯ, ಸೇವಕ ಸೌಖ್ಯ, ಪೂಜಾ ವೀಕ್ಷಣೆ ಕೊಠಡಿ, ಗೋಶಾಲೆ ಮತ್ತು ಪ್ರಾಂಗಣದ ಬಗ್ಗೆ ವಿಷಯವನ್ನು ಪ್ರಸ್ತಾವಿಸಲಾಯಿತು. ವೈ.ಕೆ. ಗೋವಿಂದ ಭಟ್ ವಿವಿವಿ ಕುರಿತಾದ ಮಾಹಿತಿಗಳನ್ನಿತ್ತರು.

                    ಮಂಡಲ ಸಹಾಯ ವಿಭಾಗ ಸಂಚಾಲಕರಾದ ಬಿ.ವಿ.ನಾರಾಯಣ ಭಟ್ ಉಪಸ್ಥಿತರಿದ್ದು ಆರೋಗ್ಯ ಕಾರ್ಡಿನ ಬಗ್ಗೆ ಮಾಹಿತಿ ನೀಡಿದರು. ಬೆಟ್ಟಂಪಾಡಿ ವಲಯದ ಕುಮಾರಿ ಭಾಗ್ಯಲಕ್ಷ್ಮಿಗೆ ಮಂಡಲದಿಂದ ನೀಡಿದ ಸಹಾಯವನ್ನು ಸ್ಮರಿಸಿದರು. ಮುಂದಿನ ತಿಂಗಳ ಮಾರ್ಚ್ 11ರಿಂದ 13 ರ ವರೆಗೆ ನಡೆಯಲಿರುವ ಕೃಷ್ಣಾರ್ಪಣಂ ಕಾರ್ಯಕ್ರಮ ಆಮಂತ್ರಣವನ್ನು ನೀಡಿ ಉಪಾಧ್ಯಕ್ಷರಾದ ಕುಸುಮಾ ಪೆರ್ಮುಖ ಅವರು ಕಾರ್ಯಕ್ರಮದ ಮಾಹಿತಿಯನ್ನು ನೀಡಿದರು. ಮುಂದಿನ ಎಪ್ರೀಲ್ ತಿಂಗಳ 2ರಂದು ಶ್ರೀಸಂಸ್ಥಾನದವರು ಮುಳ್ಳೇರಿಯ ಮಂಡಲಕ್ಕೆ ಆಗಮಿಸಲಿದ್ದು ಮೀನಗದ್ದೆ ಮನೆಯಲ್ಲಿ ಮೊಕ್ಕಾಂ ಹೂಡಲಿರುವ ವಿಷಯ ಮತ್ತು ಸುಳ್ಯ, ಗುತ್ತಿಗಾರು, ಈಶ್ವರಮಂಗಲ ವಲಯಗಳನ್ನು ಕೇಂದ್ರೀಕರಿಸಿ ವಿ.ವಿ.ವಿ. ಸಂವಾದ ನಡೆಸುವುದೆಂದು  ತಿಳಿಸಲಾಯಿತು. ಮುಜುಂಗಾವು ಶ್ರೀ ಭ|ಆ|ರತೀ ಕಣ್ಣಿನ ಆಸ್ಪತ್ರೆ, ಮುಜುಂಗಾವು ಶ್ರೀಭಾರತೀ ವಿದ್ಯಾಪೀಠ, ಸಮರಸ ಸಂಸ್ಥೆ ಮುಳ್ಳೇರಿಯ ಇವುಗಳ ಸಮಗ್ರ ಮಾಹಿತಿಯನ್ನು ವಿವರಿಸಲಾಯಿತು.

              ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಏಪ್ರಿಲ್ 16ರಂದು ನಡೆಯಲಿರುವ ಬಾಳೆಕಾಯಿಯ ಸರ್ವ ಉಪಯೋಗಗಳ ಕುರಿತಾದ  "ವಿಶೇಷ ವಿಶಿಷ್ಟ ವಿಷಮುಕ್ತ"  ಬಾಳೆಮೇಳದ ಪೂರ್ವಭಾವಿಯಾಗಿ ನಡೆದ ಸಭೆಯ ವಿವರಗಳು, ವಿವಿಧ ತಿಂಡಿತಿನಸುಗಳು, ಅಂದಿನ ಊಟೋಪಚಾರಗಳು ಹಾಗೂ ಕಾರ್ಯಕ್ರಮದ ಸ್ವರೂಪದ ವಿವರಗಳನ್ನು ನೀಡಲಾಯಿತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries