ಭಾವನಾ ಮನೆನ್.... ಇವರೊಬ್ಬ ಅದ್ಭುತ ನಟಿ, ಈಗ ಅನ್ಯಾಯದ ವಿರುದ್ಧ ಒಬ್ಬಂಟಿಯಾಗಿ ಹೋರಾಡುತ್ತಿರುವ ಕ್ರಾಂತಿ ಕಾರಿಯೂ ಆಗಿದ್ದಾರೆ. ಇತ್ತೀಚೆಗೆ ಇವರ ಕ್ರಾಂತಿಕಾರಿ ನಡವಳಿಕೆಗೆ ತುಂಬಾ ಮೆಚ್ಚುಗೆ ವ್ಯಕ್ತವಾಗಿದೆ. ಅವರು ಇಂಟರ್‌ನ್ಯಾಷನಲ್ ಫಿಲ್ಮಂ ಫೆಸ್ಟಿವಲ್ ಆಫ್ ಕೇರಳ ಕಾರ್ಯಕ್ರಮಕ್ಕೆ ಬಂದಿದ್ದರು.
ಆ ಕಾರ್ಯಕ್ರಮಕ್ಕೆ ಅವರನ್ನು ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದ್ದಾರೆ. ಅವರ ಲುಕ್ ಕೂಡ ಅವರಂತೆಯೇ ಫೈರ್ ಆಗಿದೆ. ಇದೀಗ ಅವರ ಆ ಸೂಪರ್ ಲುಕ್ ನೆಟ್ಟಿಗರ ಮನ ಗೆದ್ದಿದೆ. ಆತ್ಮವಿಶ್ವಾಸದಿಂದ ಭಾವನ ಬೀರಿದ ಆ ನಗು ಅವರಂತೆಯೇ ಕಷ್ಟ ಅನುಭವಿಸಿದ ಎಷ್ಟೋ ಹೆಣ್ಮಕ್ಕಳಿಗೆ ಮನೋಧೈರ್ಯ ತುಂಬುವಂತಿದೆ.
ಆ ಕಾರ್ಯಕ್ರಮಕ್ಕೆ ಅವರನ್ನು ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದ್ದಾರೆ. ಅವರ ಲುಕ್ ಕೂಡ ಅವರಂತೆಯೇ ಫೈರ್ ಆಗಿದೆ. ಇದೀಗ ಅವರ ಆ ಸೂಪರ್ ಲುಕ್ ನೆಟ್ಟಿಗರ ಮನ ಗೆದ್ದಿದೆ. ಆತ್ಮವಿಶ್ವಾಸದಿಂದ ಭಾವನ ಬೀರಿದ ಆ ನಗು ಅವರಂತೆಯೇ ಕಷ್ಟ ಅನುಭವಿಸಿದ ಎಷ್ಟೋ ಹೆಣ್ಮಕ್ಕಳಿಗೆ ಮನೋಧೈರ್ಯ ತುಂಬುವಂತಿದೆ.
ಸೀರೆಗೆ ಉಪ್ಪುವ ಅಲಂಕಾರ
ಕೇರಳ ಸೀರೆಗೆ ಮ್ಯಾಚ್ ಆಗುವಂಥ ಹೇರ್‌ಸ್ಟೈಲ್, ಮುಡಿಗೆ ಮಲ್ಲಿಗೆ, ಕಿವಿಗೆ ಮುತ್ತಿನ ಕಿವಿಯೋಲೆ, ಹಣೆಗೆ ಕೇರಳಿಗರು ಹಾಕುವಂಥ ಅಡ್ಡ ನಾಮ ಇವೆಲ್ಲಾ ಅವರ ಅಂದಕ್ಕೆ ಮತ್ತಷ್ಟು ಕಳೆ ನೀಡಿದೆ.
ಹಲವು ವರ್ಷಗಳ ಬಳಿಕ ಕೇರಳದ ಫಂಕ್ಷನ್‌ನಲ್ಲಿ ಕಾಣಿಸಿರುವ ಭಾವನಾ
2017ರಲ್ಲಿ ಯಾರೂ ಊಹಿಸಿರದ ದುರ್ಘಟನೆ ಅವರ ಬದುಕಿನಲ್ಲಿ ನಡೆದಿತ್ತು. ಪಾಪಿಗಳ ಕ್ರೂರ ಆಲೋಚನೆಗೆ ಅವರು ಬಲಿಪಶುವಾದರು. ಅವರೇ ಹೇಳಿರುವಂತೆ ಆ ದುರ್ಘಟನೆ ಅವರನ್ನು ಛಿದ್ರ-ಛಿದ್ರವನ್ನಾಗಿಸಿದೆ, ಆದರೆ ಈಗ ಅವರು ಅಂಥವರ ವಿರುದ್ಧ ಒಬ್ಬಂಟಿಯಾಗಿ ಹೋರಾಡುತ್ತಿದ್ದಾರೆ.
ಭಾವನಾ ಮೆನನ್ ಹೋರಾಟಕ್ಕೆ ಅಭಿಮಾನಿಗಳ ಬೆಂಬಲ
2017ರ ನಂತರ ಅವರ ಬದುಕಿನ ಒಂದೊಂದು ದಿನವೂ ಹೋರಾಟ, ಅವರ ಹೋರಾಟಕ್ಕೆ ಅವರ ಪತಿ, ಮನೆಯವರು, ಸ್ನೇಹಿತರು, ಫ್ಯಾನ್ಸ್ ಬೆಂಬಲ ನೀಡುತ್ತಿದ್ದಾರೆ. ಆ ಘಟನೆ ಬಳಿಕ ಮಲೆಯಾಳಂ ಸಿನಿಮಾದಲ್ಲಿ ನಟಿಸಿರಲಿಲ್ಲ, ಅಲ್ಲಿಯ ಕಾರ್ಯಕ್ರಮದಲ್ಲೂ ಕಾಣಿಸುತ್ತಿರಲಿಲ್ಲ, ಇತ್ತೀಚೆಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಪೋಸ್ಟ್, ಇಂಗ್ಲಿಷ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನ ತುಂಬಾನೇ ಸೆನ್ಸೇಷನ್ ಉಂಟು ಮಾಡಿದೆ.
IFFKಯಲ್ಲಿ ಭಾವನಾ ಲುಕ್ ಕೂಡ ವೈರಲ್ ಆಗಿದೆ
ಇದೀಗ IFFKಯಲ್ಲಿ ಭಾವನಾ ಮೆನನ್ ಭಾಗವಹಿಸಿರುವ ಫೋಟೋಗಳು ತುಂಬಾನೇ ವೈರಲ್ ಆಗಿದೆ. ಅವರನ್ನು ಆ ಕಾರ್ಯಕ್ರಮದಲ್ಲಿ ನೋಡಿ ಅಭಿಮಾನಿಗಳಿಗೆ ತುಂಬಾನೇ ಖುಷಿ ನೀಡಿದೆ.