ತಿರುವನಂತಪುರ: ಕೆ.ಎಸ್.ಇ.ಬಿ. ರಚನೆಯ 65ನೇ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದಂತೆ 65 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಾಗುವುದು. ಹಸಿರು ಶಕ್ತಿಯ ಪ್ರಚಾರದ ಭಾಗವಾಗಿ ವಾಹನಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಹೊಸ ಎಲೆಕ್ಟ್ರಿಕ್ ವಾಹನಗಳು ಕೆ.ಎಸ್.ಇ.ಬಿ ಯ ಅಸ್ತಿತ್ವದಲ್ಲಿರುವ ಮತ್ತು ಬಳಕೆಯಲ್ಲಿಲ್ಲದ ಡೀಸೆಲ್ ಕಾರುಗಳನ್ನು ಬದಲಾಯಿಸುತ್ತವೆ.
ಸೋಮವಾರ ಬೆಳಗ್ಗೆ ಕನಕಕುನ್ನು ಅರಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಚಿವರಾದ ಕೃಷ್ಣನ್‍ಕುಟ್ಟಿ ಮತ್ತು ಆಂಟನಿ ರಾಜು ಭಾಗವಹಿಸಲಿದ್ದಾರೆ. ಕೆಎಸ್‍ಇಬಿ ಭವಿಷ್ಯದಲ್ಲಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಯೋಜಿಸಿದೆ. ಕೆಎಸ್‍ಇಬಿ ಅಧ್ಯಕ್ಷ ಬಿ ಅಶೋಕ್ ಮಾತನಾಡಿ, ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲಿ 2.5 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಕಂಪನಿ ಹೊಂದಿದೆ ಎಂದಿರುವರು.
KSEB @ 65 ತನ್ನ ಆಚರಣೆಯ ಅಂಗವಾಗಿ ಮಾರ್ಚ್ 7 ರಿಂದ 31 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಏತನ್ಮಧ್ಯೆ, ರಾಜ್ಯದಲ್ಲಿ 62 ಕಾರ್ ಚಾಜಿರ್ಂಗ್ ಕೇಂದ್ರಗಳು ಮತ್ತು 1,150 ದ್ವಿಚಕ್ರ ವಾಹನ ಚಾಜಿರ್ಂಗ್ ಕೇಂದ್ರಗಳ ನಿರ್ಮಾಣ ಪ್ರಗತಿಯಲ್ಲಿದೆ.