ಕೊಯಮತ್ತೂರು: ಸದ್ಗುರು ಜಗ್ಗಿ ವಾಸುದೇವ್ ಶನಿವಾರ ಇಲ್ಲಿನ ಈಶ ಯೋಗ ಕೇಂದ್ರದಿಂದ ಮಣ್ಣು ಸಂರಕ್ಷಿಸುವ(SAVE SOIL) ಜಾಗತಿಕ ಆಂದೋಲನದ ಭಾಗವಾಗಿ 100 ದಿನಗಳಲ್ಲಿ 27 ರಾಷ್ಟ್ರಗಳಲ್ಲಿ 30,000 ಕಿಮೀ ದೂರ ಏಕಾಂಗಿಯಾಗಿ ಮೋಟಾರ್ ಸೈಕಲ್ ಪ್ರಯಾಣವನ್ನು ಆರಂಭಿಸಿದರು.
ಈ ಪ್ರಯಾಣದ ಮೂಲಕ 27 ರಾಷ್ಟ್ರಗಳ ನಾಯಕರ ಭೇಟಿ ಮಾಡಲಿರುವ ಸದ್ಗುರು ತಮ್ಮ ದೇಶಗಳಲ್ಲಿ ಮಣ್ಣನ್ನು ಉಳಿಸಲು ತುರ್ತು ನೀತಿ ಕ್ರಮವನ್ನು ಪ್ರಾರಂಭಿಸಲು ಒತ್ತಾಯಿಸಲಿದ್ದಾರೆ.
“ನಾವು ಎರಡು ವರ್ಷಗಳಿಂದ ಮಣ್ಣು ಉಳಿಸಿ ಆಂದೋಲನದಲ್ಲಿ ತೊಡಗಿಕೊಂಡಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸದ್ಗುರು ಹೇಳಿದರು.
ನೀವು ಕೃಷಿ ಭೂಮಿಯನ್ನು ಹೊಂದಿದ್ದರೆ, ಕನಿಷ್ಠ ಶೇಕಡಾ 3-6 ರಷ್ಟು ಸಾವಯವ ಅಂಶವು ಮಣ್ಣಿನಲ್ಲಿ ಇರಬೇಕು ಎಂಬ ನೀತಿಯನ್ನು 192 ದೇಶಗಳಲ್ಲಿ ತರುವ ಪ್ರಯತ್ನದಿಂದಾಗಿ ಈ ಚಳುವಳಿ ಆರಂಭವಾಗಿದೆ. ಇದು ಭವಿಷ್ಯದ ಪೀಳಿಗೆಗೆ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇಶಾ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ 30,000- ಕಿಲೋಮೀಟರ್ ಏಕಾಂಗಿ ಮೋಟಾರ್‌ಸೈಕಲ್ ಪ್ರಯಾಣವನ್ನು ಮಾರ್ಚ್ 21 ರಂದು ಯುಕೆಯಿಂದ ಆರಂಭಿಸಲಿದ್ದಾರೆ.
ಸದ್ಗುರುಗಳು ಯುಎನ್ ಕನ್ವೆನ್ಶನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್(ಯುಎನ್ ಸಿಸಿಡಿ) ಜೊತೆ ಕನ್ವೆನ್ಷನ್ ಆಫ್ ಪಾರ್ಟಿಟೀಸ್ (COP15)ನ 15 ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ(ಡಬ್ಲ್ಯುಇಎಫ್) ವ್ಯಾಪಾರ, ರಾಜಕೀಯ ಮತ್ತು ಸಾಮಾಜಿಕ ನಾಯಕರ ಅಂತರರಾಷ್ಟ್ರೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಯುನೈಟೆಡ್ ನೇಷನ್ಸ್ ಕನ್ವೆನ್ಷನ್ (UNCCD), ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (UNEP) ಮತ್ತು ವಿಶ್ವ ಆಹಾರ ಕಾರ್ಯಕ್ರಮ (WFP) ಕೆಲವು ಜಾಗತಿಕ ಏಜೆನ್ಸಿಗಳು ಮಣ್ಣು ಉಳಿಸಿ ಚಳುವಳಿಯೊಂದಿಗೆ ಪಾಲುದಾರಿಕೆಯನ್ನು ಹೊಂದಿವೆ.