ನವದೆಹಲಿ :ಏಷ್ಯಾದ ಪ್ರಮುಖ ಶ್ರೀಮಂತ, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ 24 ಬಿಲಿಯನ್ ಡಾಲರ್ ಅನ್ನು ಮತ್ತೆ ತಮ್ಮ ಸಂಪತ್ತಿಗೆ ಸೇರಿಸಿಕೊಂಡು ಏಷ್ಯಾದ ನಂಬರ್ 1 ಶ್ರೀಮಂತರಾಗಿದ್ದಾರೆ ಎಂದು Bloomberg Billionaires Index ಹೇಳಿದೆ.

ವಿಶ್ವದ ಅತಿದೊಡ್ಡ ಲಾಭದಾಯಕರಾಗಿ ಹೊರ ಹೊಮ್ಮಿರುವ ಅದಾನಿ, ಕಲ್ಲಿದ್ದಲು, ಬಂದರು, ಗ್ರೀನ್ ಎನರ್ಜಿ ಮೊದಲಾದ ಕ್ಷೇತ್ರದಲ್ಲಿ ತಮ್ಮ ಸಂಪತ್ತಿನ ಸಾಮ್ರಾಜ್ಯವನ್ನು ಕಟ್ಟಿದ್ದಾರೆ.
2022ರ ಜನವರಿ-ಮಾರ್ಚ್ ನಡುವೆ ಉದ್ಯಮಿ ಮುಕೇಶ್ ಅಂಬಾನಿ 8.24 ಶತಕೋಟಿ ಡಾಲರ್ ಆದಾಯ ಗಳಿಸಿದ್ದರೆ, ಗೌತಮ್ ಅದಾನಿ 24 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಆ ಮೂಲಕ ಪ್ರಸಕ್ತ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಆದಾಯ ಗಳಿಕೆಯಲ್ಲಿ ಟೆಸ್ಲಾದ ಎಲೋನ್ ಮಸ್ಕ್, ಅಮೆಜಾನ್ ಇಂಕ್‌ನ ಜೆಫ್ ಬೆಜೋಸ್, ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್‌ರನ್ನು ಹಿಂದಿಕ್ಕಿ ಹೆಚ್ಚಿನ ಆದಾಯವನ್ನು ಅದಾನಿ ಗಳಿಸಿದ್ದಾರೆಂದು ವರದಿಯಾಗಿದೆ.
ಬ್ಲೂಮ್‌ಬರ್ಗ್ 'ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ' ಅದಾನಿ, ತನ್ನ ಭಾರತೀಯ ಪ್ರತಿಸ್ಪರ್ಧಿ ಮುಕೇಶ್ ಅಂಬಾನಿ ಅವರ ನಿವ್ವಳ ಸಂಪತ್ತನ್ನೇ ಮೀರಿಸಿದ್ದು ಇದೀಗ ಏಷ್ಯಾದಲ್ಲೇ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಸದ್ಯ ಅದಾನಿ ವಿಶ್ವದಲ್ಲೇ 10ನೇ ಸ್ಥಾನದಲ್ಲಿದ್ದರೆ, ಅಂಬಾನಿ ನಂತರದ ಸ್ಥಾನದಲ್ಲಿದ್ದಾರೆ.