ಈ ಶತಮಾನದ ಖಗೋಳ ವೀಕ್ಷಕರಿಗೆ ಹಬ್ಬ, ಏಕೆಂದರೆ ಈ ವಾರ ಖಗೋಳದಲ್ಲಿ ಶುಕ್ರ, ಮಂಗಳ, ಗುರು, ಶನಿ ನೇರ ರೇಖೆಯಲ್ಲಿ ಅಂದರೆ ಒಂದೇ ಸಾಲಿನಲ್ಲಿ ಕಂಡು ಬರುತ್ತಿದೆ. ಏನಪ್ಪಾ ಇದರ ವಿಶೇಷವೆಂದರೆ 1000 ವರ್ಷಗಳ ಬಳಿಕ ಈ ಖಗೋಳ ಕೌತುಕ ಸಂಭವಿಸಿದೆ, ಇದನ್ನು ನೋಡಲು ಸಿಕ್ಕಿರುವುದು ಈ ಶತನಮಾನದವರ ಅದೃಷ್ಟವೇ ಸರಿ.
ಈ ಚಮತ್ಕಾರ ಬರಿಗಣ್ಣಿನಲ್ಲೂ ವೀಕ್ಷಿಸಬಹುದು
ಸಾಮಾನಿಕವಾಗಿ ಖಗೋಳದಲ್ಲಿ ನಡೆಯುವ ಕೌತುಕಗಳನ್ನು ವೀಕ್ಷಿಸಲು ದೂರದರ್ಶಕ ಅಥವಾ ಇತರ ವೀಕ್ಷಣಾ ಉಪಕರಣಗಳು ಬೇಕು. ಆದರೆ ಈ ಚಮತ್ಕಾರವನ್ನು ನೀವು ಬರಿಗಣ್ಣಿನಿಂದ ನೋಡಬಹುದಾಗಿದೆ. ನೀವು ಬೆಳಗ್ಗೆ ಆಕಾಶವನ್ನು ನೋಡಿದರೆ ಒಂದರ ಹಿಂದೆ ಒಂದಂತೆ ಶುಕ್ರ, ಮಂಗಳ, ಗುರು, ಶನಿ ಗ್ರಹಗಳನ್ನು ನೋಡಬಹುದು. ಮೋಡಗಳಿದ್ದರೆ ನೋಡಲು ಸಾಧ್ಯವಾಗುವುದಿಲ್ಲ, ಇಲ್ಲದಿದ್ದರೆ ಆರಾಮವಾಗಿ ಬರಿಗಣ್ಣಿನಲ್ಲಿ ವೀಕ್ಷಿಸಬಹುದು.
ಗ್ರಹಗಳ ಸಂಯೋಗದ ಅಪರೂಪದ ಗೋಚರ
ಇದನ್ನು ವೈಜ್ಞಾನಿಕವಾಗಿ ಪ್ಲಾನೆಟ್ ಪರೇಡ್ ಎಂದು ಕರೆಯಲಾಗುತ್ತಿದೆ, ಇದಕ್ಕೆ ಯಾವುದೇ ವೈಜ್ಞಾನಿಕ ವ್ಯಾಖ್ಯಾನ ಇಲ್ಲ, ಬಾಹ್ಯಾಕಾಶದಲ್ಲಿ ಸೂರ್ಯನ ಒಂದು ಬದಿಯಲ್ಲಿ ಸಾಲಾಗಿ ಗ್ರಹಗಳು ಗೋಚರಿಸುತ್ತದೆ. ಬೆಳಗ್ಗೆ ಸೂರ್ಯೋದಕ್ಕೆ ಮುನ್ನ ಸೂರ್ಯನ ನೇರಕ್ಕೆ ಮೂರು ಗ್ರಹಗಳು ಗೋಚರಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ, ಈ ಬಾರಿ ನಾಲ್ಕು ಗ್ರಹಗಳು ಗೋಚರಿಸಿದೆ.
ಈ ಅಪರೂಪದ ದೃಶ್ಯ ಎಷ್ಟು ದಿನದವರೆಗೆ ನೋಡಬಹುದು
ಏಪ್ರಿಲ್ ತಿಂಗಳ ಕೊನೆಯವರೆಗೆ ಅಂದರೆ ಇನ್ನೆರಡು ದಿನ ಈ ಗ್ರಹಗಳು ಗೋಚರಿಸಲಿದ್ದು ಈ ಅಪರೂಪದ ದೃಶ್ಯ ನೀವು ಕಣ್ತುಂಬಿಕೊಳ್ಳಬಹುದು. ನೀವು ಈ ದೃಶ್ಯವನ್ನು ಬೆಳಗ್ಗೆ 5-6 ಗಂಟೆಯ ಒಳಗಡೆ ನೋಡಿ, ಸೂರ್ಯ ಮೂಡಿದ ಮೇಲೆ ಕಾಣಿಸಲ್ಲ.