ಚೆನ್ನೈ: ಚೆನ್ನೈ ಮೂಲದ ಪ್ರಾಡಕ್ಟ್ ಇಂಜಿನಿಯರಿಂಗ್ ಸಂಸ್ಥೆ ಐಡಿಯಾಸ್2ಐಟಿ ತನ್ನ ದೀರ್ಘ ಕಾಲದ ಉದ್ಯೋಗಿಗಳಿಗೆ ಅವರು ಸಂಸ್ಥೆಗೆ ನೀಡಿದ ಗಣನೀಯ ಸೇವೆ ಹಾಗೂ ಕೊಡುಗೆಯನ್ನು ಮನ್ನಿಸಿ ತನ್ನ ಸಂಪತ್ತು ಹಂಚಿಕೆ ಕಾರ್ಯಕ್ರಮದ ಅಂಗವಾಗಿ ರೂ 15 ಕೋಟಿ ಮೌಲ್ಯದ 100 ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.

2009ರಲ್ಲಿ ಕೇವಲ ಆರು ಮಂದಿ ಇಂಜಿನಿಯರುಗಳ ಭಾಗವಹಿಸುವಿಕೆಯೊಂದಿಗೆ ಆರಂಭಗೊಂಡ ಈ ಸಂಸ್ಥೆ ಈಗ ಭಾರತ ಹೊರತಾಗಿ ಅಮೆರಿಕಾ ಮತ್ತು ಮೆಕ್ಸಿಕೋ ದೇಶಗಳಲ್ಲೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ. ಸಂಸ್ಥೆಯು ಫೇಸ್ಬುಕ್, ಬ್ಲೂಂಬರ್ಗ್, ಮೈಕ್ರೋಸಾಫ್ಟ್, ಒರೇಕಲ್, ಮೊಟೊರೋಲಾ,ರೋಶ್ ಮುಂತಾದ ಉನ್ನತ ಕಂಪನಿಗಳಿಗೆ ಸಾಫ್ಟ್‍ವೇರ್ ಸೇವೆಗಳನ್ನು ಒದಗಿಸುತ್ತಿದೆ.
ಐಡಿಯಾಸ್2ಐಟಿ ತನ್ನ 100 ಉದ್ಯೋಗಿಗಳ ಸೇವೆಯನ್ನು ಮನ್ನಿಸಿ ಅವರಿಗೆ 100 ಕಾರುಗಳನ್ನು ನೀಡಿದ ಮೊದಲ ಭಾರತೀಯ ಐಟಿ ಕಂಪೆನಿಯಾಗಿದೆ. ಈ ಉದ್ಯೋಗಿಗಳು ಸಂಸ್ಥೆಯ ಯಶಸ್ಸು ಮತ್ತು ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಇಒ ಗಾಯತ್ರಿ ವಿವೇಕಾನಂದನ್ ಹೇಳಿದ್ದಾರೆ.
ಐನೂರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಈ ಕಂಪನಿ ಸದ್ಯದಲ್ಲಿಯೇ ಚೆನ್ನೈನ ಗುಯಿಂಡಿ ಸಮೀಪದ ಹೊಸ ಕಚೇರಿಗೆ ಸ್ಥಳಾಂತರಗೊಳ್ಳಲಿದೆ.
ಇತ್ತೀಚೆಗೆ ಚೆನ್ನೈ ಮೂಲದ ಸಾಫ್ಟ್‍ವೇರ್ ಸಂಸ್ಥೆ ಕಿಸ್‍ಫ್ಲೋ ತನ್ನ ಐದು ಹಿರಿಯ ಉದ್ಯೋಗಿಗಳಿಗೆ ಬಿಎಂಡಬ್ಲ್ಯು ಕಾರುಗಳನ್ನು ಉಡುಗೊರೆಯಾಗಿ ನೀಡಿ ಗಮನ ಸೆಳೆದಿತ್ತು.