ತಿರುವನಂತಪುರಂ: 100 ಕೋಟಿ ತೆರಿಗೆ ವಂಚನೆ ಪ್ರಕರಣದಲ್ಲಿ ಕೈರಳಿ ಟಿಎಂಟಿ ಸ್ಟೀಲ್ ಬಾರ್ಸ್ ಕಾರ್ಯನಿರ್ವಾಹಕ ನಿರ್ದೇಶಕರನ್ನು ಬಂಧಿಸಲಾಗಿದೆ. ತಿರುವನಂತಪುರಂನಲ್ಲಿ ಜಿಎಸ್‍ಟಿ ಗುಪ್ತಚರ ನಿರ್ದೇಶನಾಲಯವು ಹುಮಾಯೂನ್ ಕಲ್ಲಿಯಂ ಅವರನ್ನು ಬಂಧಿಸಿದೆ. ನಕಲಿ ಬಿಲ್ ಮಾಡಿ ತೆರಿಗೆ ವಂಚನೆ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಜಿಎಸ್‍ಟಿ ಇಂಟೆಲಿಜೆನ್ಸ್ ಹುಮಾಯೂನ್ ವಿರುದ್ಧ ವಿಸ್ತೃತ ತನಿಖೆ ಆರಂಭಿಸಿದೆ. ಜಿಎಸ್‍ಟಿ ಗುಪ್ತಚರ ಹೊರತಾಗಿ, ಇತರ ವಿಭಾಗಗಳು ಇದೇ ರೀತಿಯ ಹಣಕಾಸು ವಂಚನೆಗಳು ನಡೆದಿವೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿವೆ. ತಿಂಗಳ ಕಾಲ ಕಣ್ಗಾವಲು ನಡೆಸಿದ ಬಳಿಕ ಆತನ ಬಂಧನವಾಗಿದೆ. ಎರಡು ತಿಂಗಳೊಳಗೆ ಕಂಪನಿಯ ಹತ್ತು ಸ್ಥಳಗಳಲ್ಲಿ ತಪಾಸಣೆ ಪೂರ್ಣಗೊಂಡಿದೆ. ಕಂಪನಿಯ ಎರಡು ಸೋದರ ಕಂಪನಿಗಳಲ್ಲಿ ತಪಾಸಣೆ ನಡೆಸಲಾಯಿತು.