HEALTH TIPS

ಕಾಸರಗೋಡಿಗೆ ಏಮ್ಸ್ ಮಂಜೂರಿಗಾಗಿ ಧರಣಿ: 100 ದಿನ ದಾಟಿದ ನಿರಾಹಾರ ಸತ್ಯಾಗ್ರಹ

                                      

               ಕಾಸರಗೋಡು: ಕೇರಳಕ್ಕೆ ಮಂಜೂರಾಗಿರುವ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಎಐಐಎಂಎಸ್)ಶಿಫಾರಸಿನಲ್ಲಿ ಕಾಸರಗೋಡಿನ ಹೆಸರನ್ನು ಸೇರಿಸುವಂತೆ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನೂರು ದಿನ ದಾಟಿದೆ. 101ನೇ ದಿನ ಮಹಿಳೆಯರು ನಡೆಸಿದ ಅನಿರ್ಧಿಷ್ಟಾವಧಿ ಸರಣಿ ಉಪವಾಸ ಮುಷ್ಕರದಲ್ಲಿ ತಾಯಂದಿರು ದೃಢ ನಿಲುವಿನೊಂದಿಗೆ ರಂಗಕ್ಕಿಳಿದಿದ್ದಾರೆ. ಕೇರಳಕ್ಕೆ ಏಮ್ಸ್ ಮಂಜೂರಾಗಿ ಲಭಿಸಲು ಹೋರಾಟ ನಡೆಯುತ್ತಲೇ ಇದೆ. ನೂರ ಒಂದನೇ ದಿನದ ಧರಣಿಯಲ್ಲಿ 101ಮಂದಿ ಮಹಿಳೆಯರು ನಿರಾಹಾರ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ 18ಮಂದಿ ಎಂಡೋಸಲ್ಫಾನ್ ಸಂಬಂಧಿ ಕಾಯಿಲೆಯಿಂದ ಬಳಲುವವರಾಗಿದ್ದಾರೆ.

            ಚಿತ್ರಕಲಾವಿದ, ಉದುಮದ ಬಾಲು ಉಮೇಶ್ ಅವರು ಮುಷ್ಕರಚಪ್ಪರದಲ್ಲಿ ರಚಿಸಿದ, ಎಂಡೋ ದುಷ್ಪರಿಣಾಮ ಪೀಡಿತ ತಾಯಿ ಮತ್ತು ಶೋಚನೀಯ ಸ್ಥಿತಿಯಲ್ಲಿರುವ ಮಗುವಿನ ಚಿತ್ರವನ್ನು ಅನಾವರಣಗೊಳಿಸುವ ಮೂಲಕ ಪ್ರೊ. ಕುಸುಮಾ ಜೋಸೆಫ್ ಉದ್ಘಾಟಿಸಿದರು. ಇದೇ ಸಂದರ್ಭ ಪ್ರತಿಭಟನೆಯ ಜ್ವಾಲೆಯ ನೆನಪಿಗಾಗಿ ಪ್ರತಿಭಟನಾ ಚಪ್ಪರದ ಬಳಿ ನೆರಳಿನ ಮರವಾಗಿ ಬೆಳೆಯಬಲ್ಲ ಅಶ್ವತ್ಥದ ಸಸಿಯನ್ನು 'ಹೋರಾಟದೊಂದಿಗೆ ಬೆಳೆಯುವ ಮರ' ಎಂಬ ಕಲ್ಪನೆಯೊಂದಿಗೆ ನೆಡಲಾಯಿತು. 15 ವರ್ಷದ ಜೋಫಿನಾ ಜಾನಿ ಮತ್ತು ಎಂಡೋಸಲ್ಫಾನ್ ಪೀಡಿತ ಸೌಪರ್ಣೇಶ್ ಜಾನಿ ಅವರು 'ಹೋರಾಟದಿಂದ ಬೆಳೆಯುವ ಮರ' ಎಂಬ ಕಲ್ಪನೆಯೊಂದಿಗೆ ನೆರಳಿನ ಮರವನ್ನು ನೆಟ್ಟರು. ಪ್ರಾಧ್ಯಾಪಕಿ ಕುಸುಮ್ ಜೋಸೆಫ್ ಉದ್ಘಾಟಿಸಿದರು. ಪ್ರಧಾನ ಸಂಚಾಲಕಿ ಫರೀನಾ ಕೊಟ್ಟಪುರಂ ಅಧ್ಯಕ್ಷತೆ ವಹಿಸಿದ್ದರು.

               ಕಾಸರಗೋಡಿನಲ್ಲಿ ಹೋರಾಟಗಳಿಗೆ ಸಾಕ್ಷಿಯಾಗಿ ನಿಂತಿದ್ದ ಹೊಸಬಸ್ ನಿಲ್ದಾಣ ವಠಾರದ ನೆರಳು ನೀಡುವ  ಮರಗಳು ಧರಾಶಾಯಿಯಾದ ಹಿನ್ನೆಲೆಯಲ್ಲಿ ಏಮ್ಸ್ ಹೋರಾಟ ಸಂದರ್ಭ ನಡಲಾಗುವ ಸಸಿಗಳನ್ನು ಇದಕ್ಕೆ ಬದಲಿಯಾಗಿ ಬೆಳೆಸಲೂ ತೀರ್ಮಾನಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries