ಕಾಸರಗೋಡು: ಕೇರಳ-ಕರ್ನಾಟಕ ಗಡಿ ಪ್ರದೇಶವಾಗಿರುವ ಪಣತ್ತಡಿ ಗ್ರಾಮ ಪಂಚಾಯಿತಿಯ ಪಾಣತ್ತೂರು ಕುಟುಂಬ ಆರೋಗ್ಯ ಕೇಂದ್ರಕ್ಕೆ '108 ಆಂಬುಲೆನ್ಸ್'ನ ಹೊಸ ವಾಹನ ಮಂಜೂರಾಗಿ ಲಭಿಸಿದ್ದು, ಇನ್ನು ಮುಂದಕ್ಕೆ 24 ತಾಸುಗಳ ನಿರಂತರ ಸೇವೆ ಲಭ್ಯವಾಗಲಿದೆ.
108 ಆಂಬುಲೆನ್ಸ್ ವಾಹನವು ಆಮ್ಲಜನಕ ಮತ್ತು ತಾತ್ಕಾಲಿಕ ಚಿಕಿತ್ಸಾ ಸೌಲಭ್ಯವನ್ನು ಹೊಂದಿದ್ದು, ಚಾಲಕನ ಹೊರತಾಗಿ ಒಬ್ಬ ದಾದಿಯ ಸೇವೆಯೂ ಲಭ್ಯವಾಗಲಿದೆ. ಆಂಬ್ಯುಲೆನ್ಸ್ ಸೇವೆ ಎಲ್ಲಾ ರೋಗಿಗಳಿಗೆ ಸಂಪೂರ್ಣವಾಗಿ ಉಚಿತವಾಗಿರಲಿದೆ. ಪಾಣತ್ತೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಪಂಚಾಯಿತಿ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ಆಂಬ್ಯುಲೆನ್ಸ್‍ಗೆ ಚಾಲನೆ ನೀಡಿದರು.
ಉಪಾಧ್ಯಕ್ಷ ಪಿ.ಎಂ. ಕುರಿಯಾಕೋಸ್ ಅಧ್ಯಕ್ಷತೆ ವಹಿಸಿದ್ದರು.ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಪ್ರಿಯಾ ಶಿವದಾಸ್, ಲತಾ ಅರವಿಂದನ್, ರಾಧಾಕೃಷ್ಣ ಗೌಡ, ಗ್ರಾಪಂ ಸದಸ್ಯರಾದ ಸಿ.ಆರ್. ಬಿಜು, ಕೆ.ಜೆ.ಜೇಮ್ಸ್, ಮಾಜಿ ಪಂಚಾಯಿತಿ ಅಧ್ಯಕ್ಷ ಪಿ.ಜಿ.ಮೋಹನನ್ ಹಾಗೂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎಸ್. ತಂಬಾನ್ ಮತ್ತು ಎಚ್‍ಎಂಸಿ ಸಮಿತಿ ಸದಸ್ಯರಾದ ಸುಕುಮಾರನ್, ಮೈಕೆಲ್ ಪೂವತ್ತಾನಿ ಮತ್ತು ಸನ್ನಿ ಇಯಕ್ಕುನ್ನೆಲ್ ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಡಾ. ಅನುರೂಪ್ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಕ ವಿನಯಕುಮಾರ್ ವಂದಿಸಿದರು.