HEALTH TIPS

ವಿತ್ತೀಯ ನೀತಿ ಪ್ರಕಟ, ಸತತ 11ನೇ ಬಾರಿ ಯಥಾಸ್ಥಿತಿ ಮುಂದುವರಿಕೆ: ಆರ್ ಬಿಐ ರೆಪೊ ದರ ಶೇ.4ರಷ್ಟು ಮುಂದುವರಿಕೆ

     ಮುಂಬೈ: ಹಣದುಬ್ಬರದ ಏರಿಳಿತದ ನಡುವೆ ಆರ್ ಬಿಐ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ್ದು, ಬಡ್ಡಿ ದರವನ್ನು ಬದಲಾಯಿಸದೆ ಯಥಾಸ್ಥಿತಿ ಮುಂದುವರಿಸಿದೆ.

     ಕಳೆದ ತ್ರೈಮಾಸಿಕದ ಅವಧಿಯಲ್ಲಿದ್ದಂತೆ ರೆಪೊ ದರವನ್ನು ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೊ ದರವನ್ನು ಶೇಕಡಾ 3.35ರಷ್ಟು ಮುಂದುವರಿಸಲಾಗಿದೆ. ಕೋವಿಡ್ ಸೋಂಕು ದೇಶದಲ್ಲಿ ತಲೆದೋರಿದ ನಂತರ ವಿತ್ತೀಯ ನೀತಿಯ ದರವನ್ನು ಆರ್ ಬಿಐ ಬದಲಾಯಿಸದೆ ಯಥಾಸ್ಥಿತಿ ಮುಂದುವರಿಸುತ್ತಿರುವುದು ಇದು 11ನೇ ಬಾರಿ. ಈ ಬಾರಿ ಕೂಡ ವಾಹನ, ಗೃಹ ಸಾಲದ ಬಡ್ಡಿದರವನ್ನು ಬದಲಾಯಿಸದೆ ಯಥಾಸ್ಥಿತಿ ಕಾಪಾಡಲಾಗಿದೆ. 

     ಕಳೆದ ಬಾರಿ ರೆಪೊ ದರವನ್ನು ಆರ್ ಬಿಐ ಬದಲಿಸಿದ್ದು 2020ರ ಮೇ 22ರಂದು. ಪ್ರಸಕ್ತ ಹಣಕಾಸು ವರ್ಷದ ಮೊದಲ ವಿತ್ತೀಯ ನೀತಿ ಸಭೆಯಿದು. 

     ರೆಪೊ ದರ: ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.

     ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.

      ರಿವರ್ಸ್ ರೆಪೊ ದರ: ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries