ಕಾಸರಗೋಡು: ಶ್ರೀಮದ್ ಎಡನೀರು ಮಠದ ಬೆಂಗಳೂರು ಕೋರಮಂಗಲದ ಶ್ರೀಕೃಷ್ಣ ದೇವಾಲಯದ 28ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮೇ.11 ಹಾಗೂ 12 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ 11 ರಂದು ಬುಧವಾರ ಪ್ರಾತಃಕಾಲ 7 ರಿಂದ ಗಣಹೋಮ, ಪಂಚಗವ್ಯ, ಪುಣ್ಯಾಹ ಶುದ್ದಿ, ನವಕಪ್ರಧಾನ ಕಲಶ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, 108 ನಾಳೀಕೇರ ಅಭಿಷೇಕ, ವಿಶೇಷ ಅಲಂಕಾರ ಪೂಜೆ, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 6 ರಿಂದ ವಿಶೇಷ ಪೂಜೆ, ರಾತ್ರಿ 8.30 ರಿಂದ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.30 ರಿಂದ ವಿದ್ವಾನ್. ಯೋಗೀಶ ಶರ್ಮಾ ಬಳ್ಳಪದವು ಅವರಿಂದ ಭಕ್ತಿ ಸಂಗೀತ ಪ್ರಸ್ತುತಿ ನಡೆಯಲಿದೆ. ಪಕ್ಕವಾದ್ಯದಲ್ಲಿ ವಿದ್ವಾನ್. ಮತ್ತೂರು ಶ್ರೀನಿಧಿ(ವಯಲಿನ್), ವಿದ್ವಾನ್. ಅನೂರು ವಿನೋದ್ ಶ್ಯಾಮ್(ಮೃದಂಗ), ವಿದ್ವಾನ್ ಜಗದೀಶ್ ಕುರ್ತುಕೋಟಿ(ತಬಲಾ) ದಲ್ಲಿ ಸಹಕರಿಸುವರು.
ಮೇ.12 ರಂದು ಬೆಳಿಗ್ಗೆ 7 ರಿಂದ ಗಣಹೋಮ, ಚಕ್ರಾಬ್ಜ ಪೂಜೆ, ಪಂಚಾಮೃತಾಭಿಷೇಕ, ನಾಳೀಕೇರ ಅಭಿಷೇಕ, ವಿಶೇಷ ಅಲಂಕಾರ ಪೂಜೆ, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6. ರಿಂದ ವಿಶೇಷ ಅಲಂಕಾರ ಪೂಜೆ, ಪುಷ್ಪ ರಥೋತ್ಸವ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.