ನವದೆಹಲಿ: ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ ಸತತ 12ನೇ ದಿನ ಕೂಡ ಏರಿಕೆಯಾಗಿದೆ. ಶನಿವಾರ ದೇಶದಲ್ಲಿ ಇಂಧನ ದರ ಪ್ರತಿ ಲೀಟರ್ ಗೆ 80 ಪೈಸೆ ಹೆಚ್ಚಳವಾಗಿದೆ, ಈ ಮೂಲಕ ಕಳೆದ 12 ದಿನಗಳಲ್ಲಿ 7.20 ರೂಪಾಯಿ ಲೀಟರ್ ಹೆಚ್ಚಳವಾದಂತಾಗಿದೆ.
ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ದರ ಲೀಟರ್ ಗೆ 102.61 ರೂಪಾಯಿಗೆ ಏರಿಕೆಯಾಗಿದ್ದು ಡೀಸೆಲ್ ಬೆಲೆ ಲೀಟರ್ ಗೆ 93.87 ರೂಪಾಯಿಗೆ ಹೆಚ್ಚಳವಾಗಿದೆ. ದೇಶಾದ್ಯಂತ ಹೆಚ್ಚಳವಾಗಿರುವ ಇಂಧನ ಬೆಲೆಯ ದರ ಪ್ರತಿ ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ತೆರೆಗೆ ಆಧಾರದ ಮೇಲೆ ವ್ಯತ್ಯಾಸವಾಗುತ್ತದೆ.
ನಾಲ್ಕೂವರೆ ತಿಂಗಳ ನಂತರ ಮಾರ್ಚ್ 22ರಿಂದ ಏರಿಕೆಯಾದ ಇಂಧನ ಬೆಲೆ ಏರಿಕೆಯಲ್ಲಿ ಇದು ಸತತ 12ನೇ ಹೆಚ್ಚಳವಾಗಿದೆ. ಮುಂಬೈನಲ್ಲಿ, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರೂ 117.57 ಮತ್ತು ರೂ 101 ರೂಪಾಯಿ 79 ಪೈಸೆ ಹೆಚ್ಚಾಗಿದೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 108.21 ರೂಪಾಯಿಗಳಾಗಿದ್ದು, (76 ಪೈಸೆ ಹೆಚ್ಚಾಗಿದೆ) & ಡೀಸೆಲ್ 108.21 ರೂಪಾಯಿಗಳು (76 ಪೈಸೆ ಹೆಚ್ಚಾಗಿದೆ) ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 112.19 ರೂಪಾಯಿಗಳು (84 ಪೈಸೆ ಹೆಚ್ಚಾಗಿದೆ) ಮತ್ತು ಡೀಸೆಲ್ ಬೆಲೆ 97.02 ರೂಪಾಯಿಗಳು (80 ಪೈಸೆ ಹೆಚ್ಚಿಸಲಾಗಿದೆ).