ಕೀವ್: ಕೀವ್ ನಗರದಲ್ಲಿ 1,200 ಮೃತದೇಹಗಳು ಪತ್ತೆಯಾಗಿವೆ ಎಂದು ಉಕ್ರೇನ್ ಹೇಳಿದೆ. ರಷ್ಯಾದ ಯುದ್ಧಪಡೆಗಳು ನಡೆಸಿರುವ ದೌರ್ಜನ್ಯಕ್ಕೆ ಹಲವು ಮಂದಿ ಜೀವ ಕಳೆದುಕೊಂಡಿದ್ದು, ವಾರಾಂತ್ಯದಲ್ಲಿ ಉಕ್ರೇನ್ ನಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ಪ್ರಾರಂಭಿಸಿ 6 ವಾರಗಳು ಕಳೆದಿವೆ. ಭಾನುವಾರದಂದು ಶೆಲ್ಲಿಂಗ್ ದಾಳಿಗೆ ಖಾರ್ಕೀವ್ ನಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರು.
ರಷ್ಯಾ ಸೇನೆ ಹಿನ್ನೆಡೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅದು ನಾಗರಿಕರ ಮೇಲೆ ದಾಳಿ ನಡೆಸುವುದನ್ನು ಮುಂದುವರೆಸಿದೆ ಎಂದು ಉಕ್ರೇನ್ ಆರೋಪಿಸಿದೆ.
ಉಕ್ರೇನ್ ನಲ್ಲಿರುವ ದಿನಿಪ್ರೊ ಕೈಗಾರಿಕಾ ನಗರದಲ್ಲಿ ಮಿಲಿಯನ್ ಗೂ ಹೆಚ್ಚು ಮಂದಿ ಇದ್ದು, ಇಲ್ಲಿ ರಷ್ಯಾ ಕ್ಷಿಪಣಿಗಳ ಮಳೆಗರೆದಿದೆ. ಸ್ಥಳೀಯ ವಿಮಾನ ನಿಲ್ದಾಣ ಹಾನಿಗೀಡಾಗಿದ್ದು, ಅಸಂಖ್ಯ ಪ್ರಾಣಗಾನಿ ಸಂಭವಿಸಿದೆ ಎಂದು ಉಕ್ರೇನ್ ಹೇಳಿದೆ.