ನವದೆಹಲಿ: ಖಗೋಳದಲ್ಲಿ ಇಂದು ಮಧ್ಯರಾತ್ರಿ ಗುಲಾಬಿ ವರ್ಣದ ಚಂದ್ರನ ದರ್ಶನವಾಗಲಿದೆ. ಅದನ್ನು ವೀಕ್ಷಿಸಲು ಜಗತ್ತು ಕುತೂಹಲದಿಂದ ಎದುರು ನೋಡುತ್ತಿದೆ. ಈ ವಿರಳ ವಿದ್ಯಮಾನ ಶನಿವಾರ ಮಧ್ಯರಾತ್ರಿ 12.25ಕ್ಕೆ ಗೋಚರವಾಗಲಿದೆ. ಪಿಂಕ್ ಮೂನ್ ಎಂದೇ ಜನಪ್ರಿಯವಾಗಿರುವ ಏಪ್ರಿಲ್ ತಿಂಗಳ ಈ ಚಂದ್ರನ ಬಣ್ಣ ಕಿತ್ತಳೆ ವರ್ಣದಲ್ಲಿ ಆಗಾಗ ಗೋಚರಿಸಲಿದೆ.
ಉತ್ತರ ಅಮೆರಿಕದ ಪೂರ್ವಭಾಗದಲ್ಲಿರುವ ಫ್ಲೋಕ್ಸ್ ಸುಬುಲತಾ ಗಿಡದ ಗುಲಾಬಿ ವರ್ಣದ ಹೂವು ಅರಳುವುದರೊಂದಿಗೆ ಇಂದಿನ ಚಂದ್ರೋದಯ ನೇರ ಸಂಬಂಧ ಹೊಂದಿದೆ. ಹೀಗಾಗಿ ಇದಕ್ಕೆ ಪಿಂಕ್ ಮೂನ್ ಎಂಬ ಹೆಸರು ಬಂದಿದೆ ಎನ್ನುತ್ತದೆ ಜನಪದ.
ಈ ಚಂದ್ರನ ಜತೆಗೆ ಅನೇಕ ಧಾರ್ವಿುಕ ಆಚರಣೆಗಳೂ ಜೋಡಿಸಿಕೊಂಡಿವೆ. ಕ್ರಿಶ್ಚಿಯನ್ನರ ಪಾಲಿಗೆ ಇದು ಈಸ್ಟರ್ಗೆ ಮೊದಲು ಬರುವ ಚಂದ್ರನಾದ ಕಾರಣ ಪಾಶ್ಚಲ್ ಮೂನ್, ಹಿಂದುಗಳಿಗೆ ಹನುಮಾನ್ ಜಯಂತಿ. ಇದೇ ರೀತಿ, ಏಪ್ರಿಲ್ ತಿಂಗಳ ಈ ಪೂರ್ಣ ಚಂದ್ರನನ್ನು ಮೊಳಕೆಯೊಡೆಯುತ್ತಿರುವ ಹುಲ್ಲಿನ ಚಂದ್ರ, ಗ್ರೋವಿಂಗ್ ಮೂನ್, ಫಿಶ್ ಮೂನ್ ಎನ್ನುತ್ತಾರೆ. ಬ್ರಿಟನ್ನಲ್ಲಿ ಎಗ್ ಮೂನ್ ಎಂದೂ ಹೇಳುತ್ತಾರೆ. ಕಳೆದ ವರ್ಷ ಗೋಚರಿಸಿದ್ದು ಸೂಪರ್ ಮೂನ್. ಆದರೆ ಏಪ್ರಿಲ್ ಮೂನ್ಗೂ ಇದಕ್ಕೂ ಸಂಬಂಧವಿಲ್ಲ. ಈ ವರ್ಷ ಒಟ್ಟು ಎಂಟು ರೀತಿಯ ಚಂದ್ರ ದರ್ಶನವಾಗಲಿದೆ. ಅವುಗಳ ಪೈಕಿ ಎರಡು ಸೂಪರ್ವುೂನ್ಗಳು. ಮೇ 16ರಂದು ಫ್ಲವರ್ ಮೂನ್, ಜೂನ್ 14 ರಂದು ಸ್ಟ್ರಾಬೆರಿ ಮೂನ್, ಜುಲೈ 13ರಂದು ಬಕ್ ಮೂನ್, ಆಗಸ್ಟ್ 11ರಂದು ರ್ಸrನ್ ಮೂನ್, ಸೆಪ್ಟೆಂಬರ್ 10 ಹಾರ್ವೆಸ್ಟ್ ಮೂನ್, ಅಕ್ಟೋಬರ್ 9ರಂದು ಹಂಟರ್ಸ್ ಮೂನ್, ನವೆಂಬರ್ 8ರಂದು ಬೀವರ್ ಮೂನ್, ಡಿಸೆಂಬರ್ 7ರಂದು ಕೋಲ್ಡ್ ಮೂನ್ ಕಾಣಿಸಲಿದ್ದಾನೆ.