ನವದೆಹಲಿ:ಅದಾನಿ ಎಂಟರ್ಪ್ರೈಸಸ್ ಲಿ. (ಎಇಎಲ್)ನ ಅಂಗಸಂಸ್ಥೆ ನವಿ ಮುಂಬೈ ಇಂಟರನ್ಯಾಷನಲ್ ಏರ್ಪೋರ್ಟ್ ಪ್ರೈ.ಲಿ. (ಎನ್‌ಎಂಐಎಎಲ್) ತಾನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಜೊತೆ ಸಾಲ ದಾಖಲೆಗಳನ್ನು ಕಾರ್ಯಗತಗೊಳಿಸುವುದರೊಂದಿಗೆ ನವಿ ಮುಂಬೈನ ಹಸಿರು ವಲಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಹಣಕಾಸು ಸಮಾಪನವನ್ನು ಸಾಧಿಸಿರುವುದಾಗಿ ತಿಳಿಸಿದೆ.
ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗಾಗಿ 12,770 ಕೋ.ರೂ.ಗಳ ಸಂಪೂರ್ಣ ಸಾಲದ ಅಗತ್ಯದ ಹೊಣೆಗಾರಿಕೆಯನ್ನು ಎಸ್ಬಿಐ ವಹಿಸಿಕೊಂಡಿದೆ ಎಂದು ಎನ್‌ಎಂಐಎಎಲ್ ಹೇಳಿಕೆಯಲ್ಲಿ ತಿಳಿಸಿದೆ.
ಬಳಕೆದಾರರಿಗೆ ಅತ್ಯುತ್ತಮ ವಿಮಾನ ನಿಲ್ದಾಣ ಮೂಲಸೌಕರ್ಯ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವುಕ್ಕೆ ಅದಾನಿ ಸಮೂಹವು ಗಮನವನ್ನು ಕೇಂದ್ರೀಕರಿಸಿದೆ ಎಂದು ತಿಳಿಸಿರುವ ಎನ್‌ಎಂಐಎಎಲ್ ನಿರ್ದೇಶಕ ಜೀತ್ ಅದಾನಿ ಅವರು,ಭಾರತದ ದೊಡ್ಡ ನಗರಗಳನ್ನು ಸುತ್ತುಮುತ್ತಲಿನ ನಗರಗಳೊಂದಿಗೆ ಜೋಡಿಸಿ ಅಭಿವೃದ್ಧಿಗೊಳಿಸುವುದು ನಮ್ಮ ಗುರಿಯಾಗಿದೆ. ಭವಿಷ್ಯದಲ್ಲಿ ವಿಮಾನ ನಿಲ್ದಾಣಗಳು ವಹಿಸಲಿರುವ ಪ್ರಮುಖ ಪಾತ್ರವನ್ನು ಪರಿಗಣಿಸಿ ವಿಮಾನ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣ ಬಳಕೆದಾರರನ್ನು ಮುಖ್ಯವಾಗಿಸಿಕೊಂಡಿರುವ ಆರ್ಥಿಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ನಾವು ಉದ್ದೇಶಿಸಿದ್ದೇವೆ. ಎಸ್ಬಿಐ ನ ಈ ಸೌಲಭ್ಯದೊಂದಿಗೆ ಮುಂಬೈಗೆ ಇನ್ನೊಂದು ಹೆಗ್ಗುರುತಿನ ಉಪಯುಕ್ತತೆಯನ್ನು ಒದಗಿಸುವಲ್ಲಿ ನಾವು ಇನ್ನೊಂದು ಹೆಜ್ಜೆಯನ್ನು ಮುಂದಿರಿಸಿದ್ದೇವೆ ಎಂದು ಹೇಳಿದ್ದಾರೆ.