ಪಟ್ನಾ: ಬಿಹಾರದ ರಾಜಧಾನಿ ಪಟ್ನಾದಲ್ಲಿ ಕೊರೊನಾ ರೂಪಾಂತರ ತಳಿ ಓಮೈಕ್ರಾನ್‌ನ ಉಪ ತಳಿ ಬಿಎ.12 ಪತ್ತೆಯಾಗಿದೆ. ಇಲ್ಲಿನ ಇಂದಿರಾಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಐಜಿಐಎಂಎಸ್)ಯಲ್ಲಿ ಹೊಸ ತಳಿಯನ್ನು ಪತ್ತೆ ಮಾಡಲಾಗಿದೆ.
ಪಟ್ನಾ: ಬಿಹಾರದ ರಾಜಧಾನಿ ಪಟ್ನಾದಲ್ಲಿ ಕೊರೊನಾ ರೂಪಾಂತರ ತಳಿ ಓಮೈಕ್ರಾನ್‌ನ ಉಪ ತಳಿ ಬಿಎ.12 ಪತ್ತೆಯಾಗಿದೆ. ಇಲ್ಲಿನ ಇಂದಿರಾಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಐಜಿಐಎಂಎಸ್)ಯಲ್ಲಿ ಹೊಸ ತಳಿಯನ್ನು ಪತ್ತೆ ಮಾಡಲಾಗಿದೆ.
ಹೊಸ ರೂಪಾಂತರ ತಳಿ ಬಿಎ.12, ಭಾರತದಲ್ಲಿ ಮೂರನೇ ಅಲೆ ಸಂದರ್ಭ ಪತ್ತೆಯಾಗಿದ್ದ ಬಿಎ.2 ಗಿಂತಲೂ 10 ಪಟ್ಟು ಹೆಚ್ಚು ಅಪಾಯಕಾರಿ ಎಂದೇ ಹೇಳಲಾಗುತ್ತಿದೆ.
ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಓಮೈಕ್ರಾನ್ ಸೋಂಕಿತರ ಮಾದರಿಗಳ ಜಿನೋಮ್ ಪರೀಕ್ಷೆ ನಡೆಸುತ್ತಿದ್ದೇವೆ. 13 ಮಾದರಿಗಳ ಜಿನೋಮ್ ಪರೀಕ್ಷೆ ನಡೆಸಿದ್ದು, ಒಬ್ಬರಲ್ಲಿ ಬಿಎ.12 ಪತ್ತೆಯಾಗಿದೆ. ಉಳಿದ 12 ಮಾದರಿಗಳಲ್ಲಿ ಬಿಎ.2 ಪತ್ತೆಯಾಗಿದೆ ಎಂದು ಐಜಿಐಎಂಎಸ್‌ನ ಮೈಕ್ರೊಬಯಾಲಜಿ ವಿಭಾಗದ ಮುಖ್ಯಸ್ಥೆ ಪ್ರೊ. ಡಾ. ನಮ್ರತಾ ಕುಮಾರಿ ಹೇಳಿದ್ದಾರೆ.
'ಓಮೈಕ್ರಾನ್ ಸೋಂಕಿತರ ಎಲ್ಲ ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಓಮೈಕ್ರಾನ್‌ನ ಉಪ ತಳಿ ಬಿಎ.12, ಬಿಎ.2ಗಿಂತಲೂ 10 ಪಟ್ಟು ಹೆಚ್ಚು ಅಪಾಯಕಾರಿ. ಆದರೆ, ಭಯಪಡುವ ಅಗತ್ಯವಿಲ್ಲ. ಸೋಂಕಿನಿಂದ ರಕ್ಷಿಸಿಕೊಳ್ಳಲು ಮುಂಜಾಗ್ರತೆಯ ಅಗತ್ಯವಿದೆ' ಎಂದು ಅವರು ಹೇಳಿದ್ದಾರೆ.
ಬಿಎ.12 ರೂಪಾಂತರ ತಳಿಯು ಅಮೆರಿಕದಲ್ಲಿ ಮೊದಲು ಪತ್ತೆಯಾಗಿತ್ತು. ಬಳಿಕ, ದೆಹಲಿಯಲ್ಲಿ ಎರಡು-ಮೂರು ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ, ಪಟ್ನಾದಲ್ಲಿ ಒಂದು ಪ್ರಕರಣ ವರದಿಯಾಗಿದೆ.