ಬದಿಯಡ್ಕ: ಉಪ್ಲೇರಿ ವಾಂತಿಚ್ಚಾಲು ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ 13 ನೇ ಪ್ರತಿಷ್ಠಾ ದಿನಾಚರಣೆಯು ಎಪ್ರಿಲ್ 10 ಭಾನುವಾರ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಅಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ,9 ಗಂಟೆಗೆ ಸೀಯಾಳಾಭಿಷೇಕ, ಕ್ಷೀರಾಭಿಷೇಕ, ಪುಷ್ಪಾಲಂಕಾರ, ತಂಬಿಲ ಸೇವೆ, ಬೆಳಿಗ್ಗೆ 10 ಗಂಟೆಯಿಂದ ಲೋಕ ಕಲ್ಯಾಣಾರ್ಥ ಹಾಗೂ ಸಮಸ್ತರ ಕುಟುಂಬ ಕ್ಷೇಮಕ್ಕಾಗಿ ಶ್ರೀ ರುದ್ರ ಹೈಮಾವತಿ ಅಷ್ಟೈಶ್ವರ್ಯ ಪೂಜೆ,12 ಗಂಟೆಗೆ ಧಾರ್ಮಿಕ ಸಭೆ,ಪ್ರಶಸ್ತಿ ಪ್ರಧಾನ, ಗೌರವಾರ್ಪಣೆ ನಡೆಯಲಿದೆ.
ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಯೋಗಿ ಕೌಸ್ತುಭ, ಶ್ರೀ ಮೋಹನದಾಸ ಸ್ವಾಮೀಜಿ, ಮಾಣಿಲ ಆಶೀರ್ವಚನ ನೀಡುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತುಳುವ ಬೊಳ್ಳಿ ದಯಾನಂದ ಕತ್ತಲ್ಸಾರ್ ದೀಪ ಪ್ರಜ್ವಲನೆಗೈಯುವರು. ಡಾ.ಶ್ರೀನಿಧಿ ಸರಳಾಯ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ದೈವಜ್ಞ ಕೇಶವ ಭಟ್ ನೆಲ್ಲಿಕಳಯ ಅವರಿಗೆ "ಜ್ಯೋತಿಷ್ಯ ವಾಚಾಸ್ಪತಿ" ಪ್ರಶಸ್ತಿ, ಕವಯತ್ರಿ ರಾಜಶ್ರೀ ಟಿ.ರೈ ಅವರಿಗೆ "ಸಾಹಿತ್ಯ ಸೌಗಂಧಿಕ" ಪ್ರಶಸ್ತಿ ಹಾಗೂ ಬಹುಮುಖ ಬಾಲ ಪ್ರತಿಭೆಗಳಾದ ಸಮೃದ್ಧಿ ಎಂ.ಕೆ.ಮರೋಳಿ ಅವರಿಗೆ "ತುಳುನಾಡ ಸಿರಿ ಕುರಲ್", ಹನ್ಸಿಕಾ ಮಂಗಳೂರು ಅವರಿಗೆ "ತುಳುನಾಡ ಸಿರಿ ಪುರ್ಪ", ಆದ್ಯಂತ್ ಅಡೂರು ಅವರಿಗೆ "ತುಳುನಾಡ ಸಿರಿ ಪಿಂಗಾರ" ಪ್ರಶಸ್ತಿ ಪ್ರದಾನಗೈಯಲಾಗುತ್ತದೆ. ವೇಣುಗೋಪಾಲ ಕಾಸರಗೋಡು ಅಭಿನಂದನಾ ಭಾಷಣಗೈಯುವರು. ಬದಿಯಡ್ಕ ಗ್ರಾ.ಪಂ.ಸದಸ್ಯ ಈಶ್ವರ ಮಾಸ್ತರ್ ಪೆರಡಾಲ, ನರೇಂದ್ರ ಬಿ.ಎನ್, ಜಯರಾಮ ಪಾಟಾಳಿ ಪಡುಮಲೆ ಶುಭಾಶಂಸನೆಗೈಯುವರು.ಈ ಸಂದರ್ಭದಲ್ಲಿ ಡಾ.ರವೀಶ್ ಪರವ ಪಡುಮಲೆ, ಅಬ್ದುಲ್ ಖಾದರ್ ಬದಿಯಡ್ಕ, ಕೃಷ್ಣ ಬೆಳ್ಚಾಡ ಉಪ್ಲೇರಿ,ರಾಮ ಕುಲಾಲ್ ಕುಂಟಾಲುಮೂಲೆ ಅವರಿಗೆ ಗೌರವಾರ್ಪಣೆ ಜರಗಲಿದೆ. ಮಧ್ಯಾಹ್ನ 3 ಗಂಟೆಯಿಂದ ಶ್ರೀ ಮಂತ್ರಮೂರ್ತಿ ಗುಳಿಗ ದೈವದ ಕೋಲ ಜರಗಲಿದೆ.