ಕೊಚ್ಚಿ: ಆಪರೇಷನ್ ಪಿ ಹಂಟ್‌ನ ಭಾಗವಾಗಿ ರಾಜ್ಯದಲ್ಲಿ ನಡೆಸಿದ ದಾಳಿಯಲ್ಲಿ 14 ಜನರನ್ನು ಬಂಧಿಸಲಾಗಿದೆ. ಇಂಟರ್‌ಪೋಲ್ ನೆರವಿನೊಂದಿಗೆ 448 ಕೇಂದ್ರಗಳಲ್ಲಿ ದಾಳಿ ನಡೆಸಲಾಗಿದೆ. 39 ಪ್ರಕರಣಗಳು ದಾಖಲಾಗಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸೈಬರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಂಧಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆಪರೇಷನ್ ಪಿ ಹಂಟ್ ಭಾಗವಾಗಿ ನಿನ್ನೆ ಮಧ್ಯಾಹ್ನದಿಂದ ಇಂದು ಬೆಳಗಿನ ವರೆಗೆ ರಾಜ್ಯಾದ್ಯಂತ ದಾಳಿ ನಡೆಸಲಾಗಿತ್ತು. ಆಪರೇಷನ್ ಪಿ ಹಂಟ್‌ನ ಭಾಗವಾಗಿ 2022 ರಿಂದ ಇದು ಎರಡನೇ ಬಾರಿಗೆ ದಾಳಿ ನಡೆಸಲಾಗಿದೆ. ಎಡಿಜಿಪಿ ಮನೋಜ್ ಅಬ್ರಹಾಂ ನೀಡಿರುವ ಮಾಹಿತಿ ಪ್ರಕಾರ, ಇದುವರೆಗೆ 1296 ಪ್ರಕರಣಗಳು ದಾಖಲಾಗಿವೆ.
ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಸೇರಿದಂತೆ 267 ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ನಗ್ನ ಚಿತ್ರಗಳನ್ನು ಹರಡಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಪರೇಷನ್ ಪಿ ಹಂಟ್ ಎನ್ನುವುದು ಮಕ್ಕಳನ್ನು ಒಳಗೊಂಡ ನಗ್ನ ವೀಡಿಯೊಗಳು ಮತ್ತು ಚಿತ್ರಗಳನ್ನು ವೀಕ್ಷಿಸುವ, ಪ್ರಸಾರ ಮಾಡುವ, ಆರ್ಕೈವ್ ಮಾಡುವ ಅಥವಾ ಡೌನ್‌ಲೋಡ್ ಮಾಡುವವರನ್ನು ಪತ್ತೆಹಚ್ಚುವ ಕಾರ್ಯಾಚರಣೆಯಾಗಿದೆ.