ಪಾಲಕ್ಕಾಡ್: ಪಾಲಕ್ಕಾಡ್ ಜಿಲ್ಲೆಯಲ್ಲಿ ಹೇರಲಾಗಿದ್ದ ನಿಷೇಧಾಜ್ಞೆ ತೆರವುಗೊಳಿಸಲಾಗಿದೆ. ಆರೆಸ್ಸೆಸ್ ಮಾಜಿ ಶಾರೀರಿಕ್ ಪ್ರಮುಖ್ ಶ್ರೀನಿವಾಸನ್ ಅವರ ಹತ್ಯೆಯ ನಂತರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಪರಿಶೀಲನೆ ನಡೆಸಲು ಪೋಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಮೊನ್ನೆ ಸಭೆ ನಡೆಸಲಾಗಿತ್ತು. ಇದರ ನಂತರ, 144 ಸೆಕ್ಷನ್ ಹಿಂತೆಗೆದುಕೊಳ್ಳಲಾಯಿತು.
ಇದೇ ವೇಳೆ ನಿಷೇಧಾಜ್ಞೆ ಜಾರಿಯಲ್ಲಿರುವ ಪಾಲಕ್ಕಾಡ್ ಜಿಲ್ಲೆಯಲ್ಲಿ ಸರ್ಕಾರ ಬಹಿರಂಗವಾಗಿಯೇ ಕಾನೂನು ಉಲ್ಲಂಘಿಸಿತ್ತು. 144 ಇದ್ದಾಗ ಸರ್ಕಾರವು ವಾರ್ಷಿಕೋತ್ಸವ ಆಚರಣೆಗಳು ಮತ್ತು ಮೆರವಣಿಗೆಗಳನ್ನು ಆಯೋಜಿಸಿತು. ಇದು ವಿವಾದಕ್ಕೆ ಕಾರಣವಾಗಿತ್ತು.
ಇದಾದ ಬಳಿಕ ಸಂಸದ ವಿ.ಕೆ.ಶ್ರೀಕಂಠನ್ ಕೂಡ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದರು. ಸರ್ಕಾರ ಕಾನೂನನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದು, ಮುಖ್ಯಮಂತ್ರಿಗಳು ಸ್ಪಂದಿಸಬೇಕು ಎಂದರು. ಯಾರೇ ಕಾನೂನು ಉಲ್ಲಂಘಿಸಿದರೂ ಕಾನೂನು ಕ್ರಮ ಜರುಗಿಸಬೇಕು. ಸಮಾರಂಭದಲ್ಲಿ ಪಾಲ್ಗೊಂಡ ಸಚಿವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ವಿಶೇಷ ಸಂದರ್ಭಗಳಲ್ಲಿ ಪಾಲಕ್ಕಾಡ್ ಜಿಲ್ಲೆಯಲ್ಲಿ ವಾರ್ಷಿಕೋತ್ಸವ ಆಚರಣೆಯನ್ನು ಸರ್ಕಾರ ಮುಂದೂಡಬೇಕಿತ್ತು ಎಂದೂ ಸಂಸದರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ಧೋರಣೆ ವಿರುದ್ಧ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ನಿರ್ಬಂಧಗಳು ಸಾಮಾನ್ಯ ಜನರಿಗೆ ಸೀಮಿತವಾಗಿವೆ ಎಂಬ ಟೀಕೆಗಳು ಹುಟ್ಟಿಕೊಂಡವು.