ನವದೆಹಲಿ: ಕೇಂದ್ರ ಸರ್ಕಾರ ಈಗಾಗಲೇ ಕೋವಿಡ್-19 ಸೋಂಕಿನ ವಿರುದ್ಧ ಎರಡು ಡೋಸ್ ಗಳ ಲಸಿಕೆ ನೀಡಿದೆ. ಇದೀಗ ಮುನ್ನೆಚ್ಚರಿಕೆಯ ಬೂಸ್ಟರ್ ಡೋಸ್ ಕೂಡ ಕೋವಿಡ್-19 ಲಸಿಕೆಯ ರೀತಿಯೇ ಇರಲಿದ್ದು ಖಾಸಗಿ ಲಸಿಕಾ ಕೇಂದ್ರಗಳು ಪ್ರತಿ ಡೋಸ್ ಗೆ ಸೇವಾ ಶುಲ್ಕವಾಗಿ ಗರಿಷ್ಠ 150 ರೂಪಾಯಿವರೆಗೆ ತೆಗೆದುಕೊಳ್ಳಬಹುದು.
10 ವರ್ಷ ಮೇಲ್ಪಟ್ಟವರಿಗೆ ಏಪ್ರಿಲ್ 10ರಿಂದ ಎಲ್ಲಾ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಗಳು ಸಿಗುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿದೆ.ಕೋವಿಡ್ 10 ಎರಡನೇ ಡೋಸ್ ಪಡೆದು 9 ತಿಂಗಳುಗಳನ್ನು ಪೂರೈಸಿದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಮುನ್ನೆಚ್ಚರಿಕೆ ಡೋಸ್‌ಗೆ ಅರ್ಹರಾಗಿರುತ್ತಾರೆ.
ಶನಿವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳ ಸಭೆಯನ್ನು ನಡೆಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಎಲ್ಲಾ ಫಲಾನುಭವಿಗಳು ಈಗಾಗಲೇ ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಲ್ಪಟ್ಟಿರುವುದರಿಂದ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಲು ಯಾವುದೇ ಹೊಸ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ಎರಡು ಬಾರಿ ಲಸಿಕೆ ಪಡೆದಿರುವುದನ್ನು coWIN ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು ಮತ್ತು "ಆನ್‌ಲೈನ್ ಅಪಾಯಿಂಟ್‌ಮೆಂಟ್" ಮತ್ತು "ವಾಕ್-ಇನ್" ನೋಂದಣಿ ಮತ್ತು ಲಸಿಕೆಗಳೆರಡೂ ಖಾಸಗಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ (ಅಗಿಅs) ಲಭ್ಯವಿರುತ್ತವೆ. ಕೇಂದ್ರ ಆರೋಗ್ಯ ಸಚಿವಾಲಯವು ಈ ಹಿಂದೆ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಖಾಸಗಿ ಅಗಿಅ ಗಳು ಲಸಿಕೆ ವೆಬ್ ಸೈಟ್ ಗಳನ್ನು ನಿರ್ವಹಿಸುತ್ತವೆ.
ಲಸಿಕೆಯ ವೆಚ್ಚ ಮತ್ತು ಅದಕ್ಕಿಂತ ಹೆಚ್ಚಿನ ವ್ಯಾಕ್ಸಿನೇಷನ್‌ಗೆ ಸೇವಾ ಶುಲ್ಕವಾಗಿ ಪ್ರತಿ ಡೋಸ್‌ಗೆ ಗರಿಷ್ಠ 150 ರೂಪಾಯಿಗಳವರೆಗೆ ವಿಧಿಸಬಹುದು ಎಂದು ಭೂಷಣ್ ಹೇಳಿದರು ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಆರೋಗ್ಯ ಕಾರ್ಯಕರ್ತರು (HCWs), ಕೋವಿಡ್ ಮುಂಚೂಣಿ ಕಾರ್ಯಕರ್ತರು (FLWs), 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರು ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಪ್ರಮಾಣ ಪತ್ರವನ್ನು ಪಡೆಯುವುದನ್ನು ಮುಂದುವರಿಸಬೇಕು, ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಉಚಿತ ಲಸಿಕೆಯೂ ಸೇರಿದೆ ಎಂದು ಹೇಳಿದ್ದಾರೆ.