HEALTH TIPS

15 ಲಕ್ಷ ದೈನಿಕ ಕೇಸ್!; ವಿಶ್ವದ ಹಲವೆಡೆ ಕೋರೊನಾ ಸೋಂಕು ಹೆಚ್ಚಳ

            ನವದೆಹಲಿ: ಕೋರೊನಾ ಅಲೆ ವಿಶ್ವದ ಹಲವೆಡೆ ಮತ್ತೆ ತೀವ್ರತೆ ಪಡೆದುಕೊಳ್ಳಲಾರಂಭಿಸಿದ್ದು, ನಿತ್ಯ 15 ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ. ಏಷ್ಯಾ ಖಂಡದಲ್ಲಿ ಕೋವಿಡ್ ಹೆಚ್ಚು ಪ್ರಸರಣ ಕಂಡುಬಂದಿದೆ. ಯುರೋಪ್​ನಲ್ಲಿ ಮತ್ತೊಂದು ಅಲೆಯ ಆತಂಕ ಎದುರಾಗಿದೆ.

              ಸರಾಸರಿ ಪ್ರತಿ ನಾಲ್ಕು ತಿಂಗಳಿಗೆ ಕರೊನಾ ಹೊಸ ಪ್ರಭೇದ ಕಾಣಿಸಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

          ಸೋಂಕಿನ ಪ್ರಸರಣ ತಡೆಯಲು ಸರ್ಕಾರ ಮತ್ತು ಔಷಧ ತಯಾರಿಕಾ ಕಂಪನಿಗಳು ಪ್ರತಿಯೊಬ್ಬರಿಗೂ ಲಸಿಕೆ ದೊರೆಯುವಂತೆ ಮಾಡಬೇಕು ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರೆಸ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

           ಶ್ರೀಮಂತ ರಾಷ್ಟ್ರಗಳಲ್ಲಿ ಎರಡನೇ ಬೂಸ್ಟರ್ ಡೋಸ್ ನೀಡಲು ತಯಾರಿ ಶುರುವಾಗಿದ್ದರೆ, ವಿಶ್ವದ ಮೂರನೇ ಒಂದು ಭಾಗದಷ್ಟು ಜನರು ಇನ್ನೂ ಲಸಿಕೆಯನ್ನೇ ಪಡೆದಿಲ್ಲ. ಲಸಿಕೆ ವಿತರಣೆಯಲ್ಲಿನ ಈ ಅಸಮಾನತೆಯಿಂದಾಗಿ ಹೊಸ ಹೊಸ ತಳಿಗಳು ಕಾಣಸಿಕೊಳ್ಳುತ್ತಿವೆ. ಸೋಂಕಿತರ ಮರಣದ ಸಂಖ್ಯೆ ಹೆಚ್ಚುತ್ತಿದೆ ಎಂದು ಗುಟರೆಸ್ ಹೇಳಿದ್ದಾರೆ.

                ಗುಜರಾತ್​ನಲ್ಲಿ ಮೊದಲ ಎಕ್ಸ್​ಇ: ಗುಜರಾತ್​ನ ವಡೋದರದಲ್ಲಿ ಮೊದಲ ಎಕ್ಸ್​ಇ ಪ್ರಭೇದ ಪ್ರಕರಣ ಕಂಡುಬಂದಿದೆ. ಕಳೆದ ತಿಂಗಳು ಪರೀಕ್ಷೆಗೆ ಒಳಪಟ್ಟಿದ್ದ 67 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್ ಅಗರವಾಲ್ ಖಚಿತಪಡಿಸಿದ್ದಾರೆ. ಸೋಂಕಿತ ವ್ಯವಹಾರದ ನಿಮಿತ್ತ ಮುಂಬೈಗೆ ಹೋಗಿದ್ದರು. ಅಲ್ಲಿಂದ ಬಂದ ಮೇಲೆ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ.

                ಕಪ್ಪು ಶಿಲೀಂಧ್ರ ಆತಂಕ: ಭಾರತದಲ್ಲಿ ಹಸುವಿನ ಸಗಣಿ ಮತ್ತು ಫಸಲು ಕಟಾವಿನ ನಂತರದ ತ್ಯಾಜ್ಯ (ಕೂಳೆ) ಸುಡುವಿಕೆಯಿಂದ ಕರೊನಾ ಸೋಂಕಿತರಲ್ಲಿ ಕಪುಪ ಶಿಲೀಂಧ್ರಗಳು ಕಾಣಿಸಿಕೊಳ್ಳಲು ಕಾರಣ ಎಂದು ಎಂಬಯೋ ಸಂಸ್ಥೆ ಅಧ್ಯಯನ ಹೇಳಿದೆ.

          ಚೀನಾದಲ್ಲಿ ನಿರ್ಬಂಧ: ಕರೊನಾ ಹಾವಳಿ ಹೆಚ್ಚಿರುವ ಚೀನಾದಲ್ಲಿ 23 ನಗರಗಳು ಪೂರ್ಣ ಇಲ್ಲವೆ ಭಾಗಶಃ ಲಾಕ್​ಡೌನ್​ಗೆ ಒಳಪಟ್ಟಿವೆ. 19 ಕೋಟಿ ಜನರು ನಿರ್ಬಂಧ ಕ್ರಮಗಳ ಕಟ್ಟುಪಾಡಿಗೆ ಸಿಲುಕಿದ್ದಾರೆ. ಶನಿವಾರ 1,334 ಹೊಸ ಕೇಸ್​ಗಳು ಚೀನಾದಲ್ಲಿ ಕಂಡುಬಂದಿದ್ದು, ಶಾಂಘೈನಲ್ಲಿ 1,015, ಜಿಲಿನ್​ನಲ್ಲಿ 248 ಪ್ರಕರಣಗಳು ದೃಢಪಟ್ಟಿವೆ. ಶಾಂಘೈನ ಆಸ್ಪತ್ರೆಗಳಲ್ಲಿ ಸೋಂಕು ಪೀಡಿತರಾದ ಹಿರಿಯರ ಸಾವಿನ ಪ್ರಮಾಣ ಹೆಚ್ಚಳ ಆಗಿದೆ ಎಂದು ಎಎಫ್​ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾರತದಲ್ಲಿ ಪ್ರಕರಣ ಇಳಿಕೆ: ಭಾರತದಲ್ಲಿ ಶನಿವಾರ ಬೆಳಗ್ಗೆಗೆ ಕೊನೆಗೊಂಡ 24 ತಾಸಿನಲ್ಲಿ 1,150 ಹೊಸ ಪ್ರಕರಣಗಳು ಕಂಡು ಬಂದಿದ್ದು, ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 4,30,34,217ಕ್ಕೆ ಮುಟ್ಟಿದೆ. ಸಕ್ರಿಯ ಪ್ರಕರಣ ಶೇ. 0.03ಕ್ಕೆ ಳಿಕೆ ಆಗಿದ್ದು, ಇದರ ಸಂಖ್ಯೆ 11,365ಕ್ಕೆ ತಗ್ಗಿದೆ. ಶೇ. 98.76 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ತಾಸಿನಲ್ಲಿ 83 ಜನರು ಸಾವನ್ನಪ್ಪಿದ್ದು, 5,21,656 ಒಟ್ಟಾರೆ ಮರಣ ಸಂಖ್ಯೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

                    ಇಂದಿನಿಂದ ಬೂಸ್ಟರ್ ಡೋಸ್ ಅಭಿಯಾನ

          ನವದೆಹಲಿ: ಖಾಸಗಿ ಕೇಂದ್ರಗಳಲ್ಲಿ ಹಣ ಪಾವತಿ ಆಧಾರದಲ್ಲಿ 3ನೇ ಡೋಸ್ ಕರೊನಾ ತಡೆ ಚುಚ್ಚುಮದ್ದು ವಿತರಣೆ ಭಾನುವಾರ ಆರಂಭವಾಗಲಿದ್ದು, ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಯ ದರವನ್ನು 225 ರೂ.ಗೆ ಸರ್ಕಾರ ನಿಗದಿ ಮಾಡಿದೆ. ಗರಿಷ್ಠ 150 ರೂ. ಸೇವಾ ಶುಲ್ಕವನ್ನು ಪಡೆಯಬಹುದು ಎಂಬ ಮಿತಿಯನ್ನು ಸರ್ಕಾರ ಹಾಕಿದೆ. ಇದರಿಂದ ಪ್ರತಿ ಲಸಿಕೆಯ ಬೆಲೆ 375 ರೂ. ಆಗಲಿದೆ. ಕೋವಿಶೀಲ್ಡ್ ತಯಾರಿಕಾ ಸಂಸ್ಥೆಯಾದ ಪುಣೆ ಮೂಲದ ಸೆರಂ ಮೂರನೇ ಡೋಸ್​ನ ಪ್ರತಿ ಲಸಿಕೆಗೆ 600 ರೂ. ನಿಗದಿ ಮಾಡಿತ್ತು. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್​ಗೆ 1,200 ರೂ. ಬೆಲೆ ಎಂದು ಹೇಳಿತ್ತು. ಈಗ ಇವೆರಡೂ ಸಂಸ್ಥೆಗಳು ಸರ್ಕಾರ ನಿಗದಿ ಮಾಡಿದ ದರಕ್ಕೆ ಲಸಿಕೆ ದೊರೆಯಲಿವೆ ಎಂದು ತಿಳಿಸಿವೆ.

           ನೋಂದಣಿ ಬೇಕಿಲ್ಲ: ಮೊದಲೆರಡು ಡೋಸ್ ಪಡೆದಿರುವ ವಯಸ್ಕರು 3ನೇ ಡೋಸ್ ಪಡೆಯಲು ಕೋವಿನ್ ಪೋರ್ಟಲ್ ಅಥವಾ ಆಪ್​ನಲ್ಲಿ ಮತ್ತೆ ನೋಂದಣಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.


          


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries