HEALTH TIPS

ಏಪ್ರಿಲ್ 16ರಂದು ಬದಿಯಡ್ಕದಲ್ಲಿ ನಡೆಯಲಿದೆ ವಿವಿವಿ ಪಾಕಲೋಕ: ಶ್ರೀ ರಾಘವೇಶ್ವರ ಶ್ರೀಗಳಿಂದ ಪ್ರಚಾರ ಸಾಮಾಗ್ರಿಗಳ ಬಿಡುಗಡೆ


              ಬದಿಯಡ್ಕ: ಏಪ್ರಿಲ್ 16ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯಲಿರುವ ವಿಶಿಷ್ಟ ವಿಶೇಷ ವಿಷಮುಕ್ತ ಪಾಕಲೋಕ 22 ಕಾರ್ಯಕ್ರಮದ ಪ್ರಚಾರ ಸಾಮಾಗ್ರಿಗಳನ್ನು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು. 

             ಭಾನುವಾರ ಮುಳ್ಳೇರಿಯ ಮಂಡಲದ ಜಾಲ್ಸೂರು ಸಮೀಪ ಮೀನಗದ್ದೆ ನಂದಿಕೇಶ್ವರ ನಿಲಯದಲ್ಲಿ ಜರಗಿದ ಉಪನಯನ ಹಾಗೂ ಗುರುಭಿಕ್ಷಾ ಸೇವೆಯ ಸಂದರ್ಭದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿವಿವಿ ಪಾಕಲೋಕ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡು ಬಾಳೆಕಾಯಿಯ ವಿವಿಧ ಉತ್ಪನ್ನಗಳನ್ನು ಸಮರ್ಪಿಸಿ ಶ್ರೀಗಳ ಆಶೀರ್ವಾದವನ್ನು ಪಡೆದುಕೊಂಡರು. ಶ್ರೀಗಳು ಶುಭ ಹಾರೈಸಿ ಕಾರ್ಯಕ್ರಮದ ಯಶಸ್ಸಿಗಾಗಿ ಹರಸಿ ಮಂತ್ರಾಕ್ಷತೆಯನ್ನು ನೀಡಿದರು. ಮುಳ್ಳೇರಿಯ ಹವ್ಯಕ ಮಂಡಲ ಹಾಗೂ ಮಹಿಳೋದಯ ಬದಿಯಡ್ಕ ಇವರ ನೇತೃತ್ವದಲ್ಲಿ ಏಪ್ರಿಲ್ 16ರಂದು ಬಾಳೆಕಾಯಿಯ ಮೌಲ್ಯವರ್ಧನೆಗೆ ಪೂರಕವಾದ ಕಾರ್ಯಕ್ರಮ ನಡೆಯಲಿರುವುದು. ಇದರೊಂದಿಗೆ ಗೋಕರ್ಣದ ಅಶೋಕೆಯಲ್ಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ (ವಿವಿವಿ)ದ ಸಮಗ್ರ ಅಭಿವೃದ್ಧಿಗೆ ದೇಣಿಗೆಯನ್ನೂ ನೀಡಲಾಗುವುದು. ಮೇಳದಲ್ಲಿ ಬಾಳೆಯ ವಿವಿಧ ಉತ್ಪನ್ನಗಳ ಪರಿಚಯ, ಬಾಳೆಯ ಕುರಿತಾದ ಸಮಗ್ರ ವಿವರಣೆ, ಖಾದ್ಯಗಳಾದ ಹಲ್ವ, ಚಿಪ್ಸ್, ಹಪ್ಪಳ, ಸೆಂಡಿಗೆ ಮೊದಲಾದ ಉತ್ಪನ್ನಗಳ ಮಾರಾಟ ನಡೆಯಲಿದೆ. ಬೇರೆ ಬೇರೆ ಜಾತಿಯ ಬಾಳೆಹಣ್ಣುಗಳು, ಕಾಯಿಗಳು ಪ್ರದರ್ಶನಗೊಳ್ಳಲಿದೆ. ನಾನಾಕಡೆಗಳಿಂದ ಸಹಸ್ರಾರು ಮಂದಿ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries