ನವದೆಹಲಿ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಬೂಸ್ಟರ್ ಡೋಸ್ ನೀಡಿಕೆ ಅಭಿಯಾನ ನಿನ್ನೆಯಿಂದ ಆರಂಭವಾಗಿದ್ದು, ಮೊದಲ ದಿನ ಒಟ್ಟು 9,674 ಡೋಸ್ ನೀಡಲಾಗಿದೆ. ಇದರೊಂದಿಗೆ ದೇಶಾದ್ಯಂತ ಒಟ್ಟಾರೇ 185. 74 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಎರಡನೇ ಡೋಸ್ ಪಡೆದು 9 ತಿಂಗಳು ಕಳೆದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ. ಈವರೆಗೂ 12-14 ವರ್ಷದೊಳಗಿನ 2.22 ಕೋಟಿ ಮಕ್ಕಳು ಕೋವಿಡ್-19 ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.
ಈ ಹಿಂದೆ ಮೊದಲ ಹಾಗೂ ಎರಡನೇ ಡೋಸ್ ಗೆ ಬಳಸಿದ ಲಸಿಕೆಯೇ ಮುನ್ನೆಚ್ಚರಿಕೆ ಡೋಸ್ ಆಗಿದ್ದು, ಖಾಸಗಿ ಲಸಿಕಾ ಕೇಂದ್ರಗಳು ಪ್ರತಿ ಡೋಸ್ ಗೆ ಗರಿಷ್ಠ ರೂ. 150 ಸೇವಾ ಶುಲ್ಕ ವಿಧಿಸಬಹುದೆಂದು ಕೇಂದ್ರ ಸರ್ಕಾರ ಶನಿವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತ್ತು.