ನವದೆಹಲಿ: ಸರ್ಕಾರದ ನಿರ್ಲಕ್ಷ್ಯಕ್ಕೆ 40 ಲಕ್ಷ ಭಾರತೀಯರ ಸಾವು ಸಂಭವಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಟ್ವಿಟರ್ ನಲ್ಲಿ ಬರೆದಿರುವ ರಾಹುಲ್ ಗಾಂಧಿ, ನ್ಯೂಯಾರ್ಕ್ ಟೈಮ್ಸ್ ನ ವರದಿಯನ್ನು ಉಲ್ಲೇಖಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ಕೋವಿಡ್-19 ತಡೆಗೆ ಡಬ್ಲ್ಯುಹೆಚ್ಒ ಶ್ರಮಗಳನ್ನು ಭಾರತ ಹಾಳುಮಾಡುತ್ತಿದೆ ಎಂದು ಹೇಳಿತ್ತು.
ಪ್ರಧಾನಿ ಮೋದಿ ಸತ್ಯ ಹೇಳುವುದಿಲ್ಲ. ಬೇರೆಯವರಿಗೂ ಮಾತನಾಡಲು ಬಿಡುವುದಿಲ್ಲ. ಆಕ್ಸಿನ್ ಕೊರತೆಯಿಂದ ಯಾರೂ ಸಾವನ್ನಪ್ಪಿಲ್ಲ ಎಂದು ಇಂದಿಗೂ ಸುಳ್ಳು ಹೇಳುತ್ತಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಹಿಂದೆಯೂ ಸರ್ಕಾರದ ನಿರ್ಲಕ್ಷ್ಯದಿಂದ 40 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದೆ. ಜನರ ಸಾವಿಗೆ ಮೋದಿ ಅವರೇ ಕಾರಣ, ಎಂದು ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಹೇಳಿದ್ದಾರೆ.