ನವದೆಹಲಿ: ಗುರುವಾರ ನಡೆದ ಚುನಾವಣೆಯಲ್ಲಿ ಅಸ್ಸಾಂ, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಪಕ್ಷವು ತಲಾ ಒಂದು ಸ್ಥಾನವನ್ನು ಗೆದ್ದ ನಂತರ ಬಿಜೆಪಿ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ 100 ಸದಸ್ಯರನ್ನು ಹೊಂದಿರುವ ಸಾಧನೆ ಮಾಡಿದೆ.
ಬಿಜೆಪಿಯೂ ಅಧಿಕೃತವಾಗಿ ಹೆಗ್ಗುರುತನ್ನು ತಲುಪಿದ್ದು ನೂರರ ಅಂಕಿಅಂಶದ ಮೇಲೆ ಅದರ ಹಿಡಿತವು ಕ್ಷೀಣವಾಗಬಹುದು. ಕಾರಣ ಸುಮಾರು 52 ಸ್ಥಾನಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಆಂಧ್ರ ಪ್ರದೇಶ, ಛತ್ತೀಸ್‌ಗಢ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯಗಳಿಂದ ಅದರ ಸಂಖ್ಯೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ.
11 ಸಂಭಾವ್ಯ ಖಾಲಿ ಸ್ಥಾನಗಳಲ್ಲಿ ಕನಿಷ್ಠ ಎಂಟು ಸ್ಥಾನಗಳನ್ನು ಗೆಲ್ಲಬಹುದಾದ ಉತ್ತರ ಪ್ರದೇಶದಿಂದ ಬಿಜೆಪಿಯ ನಿರೀಕ್ಷಿತ ಲಾಭವು ನಷ್ಟವನ್ನು ತುಂಬುತ್ತದೆಯೇ ಎಂದು ನೋಡಬೇಕಾಗಿದೆ. ಉತ್ತರ ಪ್ರದೇಶದ 11 ನಿವೃತ್ತ ರಾಜ್ಯಸಭಾ ಸದಸ್ಯರಲ್ಲಿ ಐವರು ಬಿಜೆಪಿಯವರಾಗಿದ್ದಾರೆ.
ಆರು ರಾಜ್ಯಗಳಾದ್ಯಂತ 13 ರಾಜ್ಯಸಭಾ ಸ್ಥಾನಗಳಿಗೆ ಇತ್ತೀಚೆಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ, ಬಿಜೆಪಿ ಪಂಜಾಬ್‌ನಿಂದ ತನ್ನ ಏಕಾಂಗಿ ಸ್ಥಾನವನ್ನು ಕಳೆದುಕೊಂಡಿದೆ. ಆದರೆ ಮೂರು ಈಶಾನ್ಯ ರಾಜ್ಯಗಳು ಮತ್ತು ಹಿಮಾಚಲ ಪ್ರದೇಶದಿಂದ ತಲಾ ಒಂದನ್ನು ಗಳಿಸಿದೆ. ಅಲ್ಲಿ ಎಲ್ಲಾ ಐದು ಹೊರಹೋಗುವ ಸದಸ್ಯರು ವಿರೋಧ ಪಕ್ಷದವರಾಗಿದ್ದರು.
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಎಲ್ಲಾ ಐದು ಸ್ಥಾನಗಳನ್ನು ಗೆದ್ದಿದೆ. ರಾಜ್ಯಸಭಾ ವೆಬ್‌ಸೈಟ್ ಹೊಸ ಲೆಕ್ಕಾಚಾರವನ್ನು ಇನ್ನೂ ತಿಳಿಸದಿದ್ದರೂ, ಇತ್ತೀಚಿನ ಸುತ್ತಿನ ಚುನಾವಣೆಯಲ್ಲಿ ಗಳಿಸಿದ ಮೂರು ಸ್ಥಾನಗಳನ್ನು ಈಗಿರುವ 97ಕ್ಕೆ ಸೇರಿಸಿದರೆ ಬಿಜೆಪಿಯ ಸಂಖ್ಯೆ 100ಕ್ಕೆ ತಲುಪುತ್ತದೆ.