ಕಾಸರಗೋಡು: ರಾಜ್ಯ ಸರ್ಕಾರದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮೇ 3 ರಿಂದ 9 ರವರೆಗೆ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ಅಲಾಮಿಪಲ್ಲಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾದ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಏ. 19ರಂದು ಸ್ವಚ್ಛ ಕಾಸರಗೋಡು ದಿನವನ್ನಾಗಿ ಆಚರಿಸಲಾಗುವುದು. ಜಿಲ್ಲಾ ಮಟ್ಟದ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಎಲ್ಲಾ ಕಚೇರಿಗಳಿಗೆ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಸಂಘಟನಾ ಸಮಿತಿ ನಿರ್ಧರಿಸಿದೆ. ಎಲ್ಲಾ ಕಚೇರಿ, ಆವರಣ ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿರಿಸುವುದು, ಕೊಳೆಯುವ ಮತ್ತು ಕೊಳೆಯದ ತ್ಯಾಜ್ಯ ಎಂದು ವಿಂಗಡಿಸಿ ಗೊಬ್ಬರವಾಗಿಸಿ ಸಂಗ್ರಹಿಸಿಟ್ಟುಕೊಳ್ಳಬೇಕು. ಕೊಳೆಯದಿರುವ ತ್ಯಾಜ್ಯವನ್ನು ಕ್ಲೀನ್ ಕೇರಳ ಕಂಪನಿ ಅಥವಾ ಇತರ ಸ್ಕ್ರ್ಯಾಪ್ ಡೀಲರ್‍ಗಳಿಗೆ ಸಕಾಲದಲ್ಲಿ ಹಸ್ತಾಂತರಿಸಬೇಕು. ಜಿಲ್ಲಾ ಶುಚಿತ್ವ ಮಿಷನ್, ಯುವಜನ ಕಲ್ಯಾಣ ಮಂಡಳಿ ಕೇರಳ ತಂಡ ಮತ್ತು ಯೂತ್ ಕ್ಲಬ್‍ಗಳ ಸಹಯೋಗದಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.