HEALTH TIPS

ಕೋವಿಡ್19 ಸಾವಿನ ಸಂಖ್ಯೆಯ ಏಣಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಬಳಸುವ ವಿಧಾನಕ್ಕೆ ಭಾರತ ವಿರೋಧ

                ನವದೆಹಲಿದೇಶದಲ್ಲಿ ಕೋವಿಡ್19 ನಿಂ ಮೃತಪಟ್ಟವರ ಸಂಖ್ಯೆಯನ್ನು ಅಂದಾಜಿಸಲು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲುಎಚ್‌ಓ) ಅನುಸರಿಸುತ್ತಿರುವ ವಿಧಾನವನ್ನು ಭಾರತವು ಪ್ರಶ್ನಿಸಿದೆ. ಭೌಗೋಳಿಕವಾಗಿ ವಿಶಾಲವಾದ ಗಾತ್ರ ಹಾಗೂಅಪಾರ ಜನಸಂಖ್ಯೆಯನ್ನು ಹೊಂದಿರುವ ಈ ದೇಕ್ಕೆ ಇಂತಹ ಗಣಿತಶಾಸ್ತ್ರೀಯ ವಿಧಾನ (ಮ್ಯಾಥಮ್ಯಾಟಿಕಲ್ ಮಾಡೆಲಿಂಗ್)ವನ್ನು ಅನ್ವಯಿಸಲು ಸಾಧ್ಯವಿಲ್ಲವೆಂದು ಆದು ಹೇಳಿದೆ.

           ''ಜಾಗತಿಕ ಕೋವಿಡ್ ಸಾವಿನ ಸಂಖ್ಯೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಡಬ್ಲುಎಚ್‌ಓ ಪ್ರಯತ್ನಗಳಿಗೆ ಭಾರತ ತಡೆಯೊಡ್ಡುತ್ತಿದೆ'' ಎಂಬ ಶೀರ್ಷಿಕೆಯೊಂದಿಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ಈ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ. ಕೋವಿಡ್ ಸಾವಿನ ಸಂಖ್ಯೆಯನ್ನು ಲೆಕ್ಕ ಹಾಕಲು ಬಳಸಲಾಗುತ್ತಿರವ ವಿಧಾನದ ಬಗ್ಗೆ ತನ್ನ ಕಳವಳವನ್ನು ತಾನು ಹಲವಾರು ಸಂದರ್ಭಗಳಲ್ಲಿ ಡಬ್ಲುಎಚ್‌ಓ ಜೊತೆ ಹಂಚಿಕೊಂಡಿರುವುದಾಗಿ ಅದು ಹೇಳಿಕೆಯಲ್ಲಿ ತಿಳಿಸಿದೆ.

              ಕೋವಿಡ್19 ಸಾವಿನ ಸಂಖ್ಯೆಗಳ ಕುರಿತು ಮೊದಲನೆ ಸ್ತರದ ದೇಶಗಳಿಂದ ಸಂಗ್ರಹಿಸುವ ದತ್ತಾಂಶಗಳಿಗೂ, ಭಾರತದ ರಾಜ್ಯಗಳಲ್ಲಿ ದತ್ತಾಂಶ ಸಂಗ್ರಹಕ್ಕೂ ಏಕ ರೀತಿಯ ವಿಧಾನವನ್ನು ಅನುಸರಿಸುವುದರಿಂದ ಸಾವಿನ ಸಂಖ್ಯೆಯನ್ನು ತಪ್ಪಾಗಿ ಅಂದಾಜಿಸುವ ಸಾಧ್ಯತೆಯಿರುತ್ತದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

         ಕೋವಿಡ್ ಸಾವಿನ ಸಂಖ್ಯೆಯನ್ನು ಏಣಿಸಲು ಬಳಸಲಾಗುತ್ತಿರುವ ವಿಧಾನಶಾಸ್ತ್ರ (ಮೆಥಡಾಲಜಿ)ದ ಬಗ್ಗೆ ತನ್ನ ಕಳವಳವನ್ನು ಭಾರತವು ಇತರ ಸದಸ್ಯ ರಾಷ್ಟ್ರಗಳ ಜೊತೆ ಔಪಚಾರಿಕ ಸಂವಹನಗಳ ಮೂಲಕ ಹಂಚಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ಈ ಕುರಿತಾಗಿ ಆರು ಪತ್ರಗಳನ್ನು (2021ರಲ್ಲಿ ನವೆಂಬರ್ 17, ಡಿಸೆಂಬರ್ 29 ಹಾಗೂ ಡಿಸೆಂಬರ್ 28ರಲ್ಲಿ; 2022ರಲ್ಲಿ ಜನವರಿ 11, ಫೆಬ್ರವರಿ 12 ಹಾಗೂ ಮಾರ್ಚ್ 2) ಬರೆದಿರುವುದಾಗಿ ಅದು ಹೇಳಿದೆ.

              ಕೋವಿಡ್ನಿಂದ ಸಂಭವಿಸಿದ ಸಾವಿನ ಸಂಖ್ಯೆಗಳನ್ನು ಲೆಕ್ಕಹಾಕಲು ಬಳಸಲಾಗುವ ವಿಧಾನಸಾಸ್ತ್ರ ಹಾಗೂ ಅನಧಿಕೃತ ದತ್ತಾಂಶಗಳ ಬಳಕೆಯನ್ನು ಭಾರತದ ಜೊತೆ ಇತರ ಸದಸ್ಯ ರಾಷ್ಟ್ರಗಳದ ಚೀನಾ, ಇರಾನ್, ಬಾಂಗ್ಲಾ, ಸಿರಿಯಾ, ಇಥಿಯೋಪಿಯಾ ಹಾಗೂ ಈಜಿಪ್ಟ್ ಕೂಡಾ ಪ್ರಶ್ನಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries