ಅನೇಕ ದಿನಗಳನ್ನು ಆಚರಿಸುತ್ತೇವೆ, ಆದರೆ ಏಪ್ರಿಲ್ 1ರಂದು ನಾವೆಲ್ಲಾ ಏಪ್ರಿಲ್ ಫೂಲ್ ಆಚರಿಸುತ್ತೇವೆ ಅಲ್ವಾ? ಎಷ್ಟೊಂದು ವಿಚಿತ್ರ ನೋಡಿ ಏಪ್ರಿಲ್ ಫೂಲ್ ಅಂದ್ರೆ ಮೂರ್ಖರ ದಿನ. ಆದರೆ ಆ ದಿನ ಆಚರಣೆಗೆ ನಾವೆಲ್ಲಾ ಸಾಕಷ್ಟು ಪ್ಲ್ಯಾನ್ ಮಾಡುತ್ತೇವೆ, ಆ ದಿನ ಯಾರನ್ನು ಮೂರ್ಖರನ್ನಾಗಿ ಮಾಡಬೇಕೆಂದು ಈಗಾಗಲೇ ಪ್ಲ್ಯಾನ್ ಕೂಡ ರೆಡಿಯಾಗಿರುತ್ತೆ ಅಲ್ವಾ?
ಈ ಏಪ್ರಿಲ್ ಫೂಲ್ ಅನ್ನು ಏಕೆ ಆಚರಿಸಲಾಗುವುದು, ಇದರ ಮಹತ್ವವೇನು , ಈ ದಿನ ಏಕೆ ಒಬ್ಬರನ್ನೊಬ್ಬರು ತಮಾಷೆ ಮಾಡುತ್ತಾರೆ ಎಂದು ನೋಡೋಣ ಬನ್ನಿ:
ಏಪ್ರಿಲ್ 1: ಏಪ್ರಿಲ್ ಫೂಲ್ಸ್ ಏಪ್ರಿಲ್ ಫೂಲ್ಸ್ ಎಂಬುವುದು ಪಾಶ್ಚಾತ್ಯ ಸಂಸ್ಕೃತಿಯಾಗಿದೆ. ಏಪ್ರಿಲ್ ಫೂಲ್ಸ್ ಅನ್ನು ವಿಶ್ವದ ಎಲ್ಲಾ ಕಡೆ ಆಚರಿಸಲಾಗುವುದು. ಈ ದಿನ ಏನಾದರೂ ಪ್ರಾಂಕ್ಸ ಮಾಡಿ ತಮಾಷೆ ನೋಡಲಾಗುವುದು, ನಂತರ ಏಪ್ರಿಲ್ ಫೂಲ್ ಎಂದು ಜೋರಾಗಿ ಕಿರುಚಲಾಗುವುದು. ಇದನ್ನು ಎಲ್ಲಾ ಕಡೆ ತುಂಬಾ ಸಂತೋಷದಿಂದ ಆಚರಿಸಲಾಗುವುದು. ಉಕ್ರೇನ್‌ನಲ್ಲಿ ಈ ದಿನವನ್ನು ಒಂದು ಹಬ್ಬದಂತೆ ಆಚರಿಸಲಾಗುತ್ತಿತ್ತು, ಈ ವರ್ಷದ ಯುದ್ಧದ ಕಾರಣದಿಂದಾಗಿ ಅಲ್ಲಿಯ ಚಿತ್ರಣವೇ ಬದಲಾಗಿದೆ.
ಏಪ್ರಿಲ್ ಫೂಲ್ ಏಕೆ ಆಚರಿಸಲಾಗುತ್ತಿದೆ? ಇತಿಹಾಸಗಾರರು ಈ ದಿನ ಬಗ್ಗೆ ಬೇರೆ-ಬೇರೆ ಅಭಿಪ್ರಾಯ ಹೇಳುತ್ತಾರೆ, ಕೆಲವರು ಇದು ಒಮದು ಸೀಸನಲ್ ಆಚರಣೆ ಎಂದು ಹೇಳಿದರೆ ಇನ್ನ ಕೆಲವರು ಈ ದಿನದಿಂದ ಹೊಸ ಕ್ಯಾಲೆಂಡರ್ ಪ್ರಾರಂಭವಾಗುವುದಕ್ಕೆ ಈ ದಿನ ಆಚರಿಸಲಾಗುವುದು ಎಂದು ಹೇಳಲಾಗುತ್ತದೆ. ಹಳೆಯ ಜುಲೈಯನ್ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷವನ್ನು ಮಾರ್ಚ್ ಕೊನೆಯ ದಿನ ಅಥವಾ ಏಪ್ರಿಲ್ 1ರಿಂದ ಆಚರಿಸಲಾಗುತ್ತಿತ್ತು. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಜನರು ಜನವರಿ `1ಕ್ಕೆ ಹೊಸ ವರ್ಷವನ್ನು ಆಚರಿಸಲಾಗುವುದು. ಕೆಲವರು ಈಗಲೂ ಜುಲೈಯನ್ ಕ್ಯಾಲೆಂಡರ್ ಬಳಸುತ್ತಾರೆ. ಹೊಸ ವರ್ಷವನ್ನು ತಪ್ಪಾದ ದಿನಾಂಕದಲ್ಲಿ ಆಚರಿಸಲಾಗುತ್ತಿದೆ ಎಂದು ಏಪ್ರಿಲ್ ಫೂಲ್ ಆಚರಿಸಲಾಗುತ್ತಿದೆ ಎಂದು ಹೇಳಲಾಗುವುದು.
ಏಪ್ರಿಲ್ ಫೂಲ್ ಮಹತ್ವ ಒಂದು ಕತೆಯ ಪ್ರಕಾರ ರೋಮನ್ ಸಾಮ್ರಾಜ್ಯದಲ್ಲಿ ಕಾನ್ಸ್ಟಂಟೈನ್ ಎಂಬ ರಾಜನಿದ್ದ, ಅವನ ಸಾಮ್ರಾಜ್ಯದಲ್ಲಿ ಮೂರ್ಖರೇ ತುಂಬಿದ್ದರು, ಅವರೆಲ್ಲಾ ಸೇರಿ ನಿನ್ನ ಆಡಳಿತ ತುಂಬಾನೇ ಚೆನ್ನಾಗಿದೆ ಎಂದು ನಂಬಿಸಿದ್ದರು. ಆ ಖುಷಿಯಲ್ಲಿ ಅವನು ಅವರಲ್ಲಿ ಒಬ್ಬನಿಗೆ ಆಡಳಿತ ನಡೆಸಲು ಅನುಮತಿ ನೀಡಿದ, ಅವನು ಏನೂ ಮಾಡದೆ ಆ ದಿನ ಕಳೆದ ಅಂದಿನಿಂದ ಮೂರ್ಖರ ದಿನ ಆಚರಣೆಗೆ ಬಂತು ಎಂಬ ಕತೆಯಿದೆ. ಮೂರ್ಖರ ದಿನವನ್ನು ಎಲ್ಲರೂ ಸಂತೋಷದಿಂದ ಆಚರಿಸುತ್ತಾರೆ. ಈ ದಿನ ನೀವು ತಮಾಷೆ ಮಾಡಿ ಖುಷಿ ಪಡಿ, ಆದರೆ ನಿಮ್ಮ ತಮಾಷೆ ಬೇರೆಯವರಿಗೆ ಆಘಾತ ಅಥವಾ ನೋವು ಉಂಟು ಮಾಡದಿರಿ.