ಗುಜರಾತ್: ಭಾರತ ಕ್ಷೀರ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ನಂ.1 ಸ್ಥಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಭಾರತದಲ್ಲಿ ವಾರ್ಷಿಕ 8.5 ಲಕ್ಷ ಕೋಟಿ ಮೌಲ್ಯದ ಹಾಲು ಉತ್ಪಾದನೆಯಾಗುತ್ತದೆ. ಇದು ಗೋಧಿ, ಭತ್ತದ ಉತ್ಪಾದನೆಗಿಂತಲೂ ಅಧಿಕವಾಗಿದ್ದು ಸಣ್ಣ ರೈತರು ಡೈರಿ ಕ್ಷೇತ್ರದ ಅತಿ ದೊಡ್ಡ ಫಲಾನುಭವಿಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬನಸ್ಕಾಂತದ ದಿಯೋದರ್ ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿ, ಇಂದು, ಭಾರತವು ವಿಶ್ವದ ಅತಿದೊಡ್ಡ ಕ್ಷೀರ ಉತ್ಪಾದಕ ರಾಷ್ಟ್ರವಾಗಿದೆ. ಕೋಟ್ಯಂತರ ರೈತರ ಜೀವನವು ಹಾಲಿನ ಮೇಲೆ ಅವಲಂಬಿತವಾಗಿರುವಾಗ, ಭಾರತವು ವಾರ್ಷಿಕವಾಗಿ 8.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹಾಲನ್ನು ಉತ್ಪಾದಿಸುತ್ತದೆ ಎಂದು ಹೇಳಿದರು
ಗ್ರಾಮಗಳ ವಿಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯು ಇದಕ್ಕೆ ಉದಾಹರಣೆಯಾಗಿದೆ. ಇದಕ್ಕೆ ವಿರುದ್ಧವಾಗಿ, ಗೋಧಿ ಮತ್ತು ಅಕ್ಕಿಯ ವಹಿವಾಟು ಕೂಡ 8.5 ಲಕ್ಷ ಕೋಟಿ ರೂ ಗೆ ಸಮನಾಗುವುದಿಲ್ಲ. ಸಣ್ಣ ರೈತರು ಹೈನುಗಾರಿಕೆ ಕ್ಷೇತ್ರದ ದೊಡ್ಡ ಫಲಾನುಭವಿಗಳು ಎಂದು ಹೇಳಿದರು.
ಹೊಸ ಡೈರಿ ಸಂಕೀರ್ಣ ಮತ್ತು ಬನಾಸ್ ಡೈರಿಯ ಆಲೂಗೆಡ್ಡೆ ಸಂಸ್ಕರಣಾ ಘಟಕವು ಸ್ಥಳೀಯ ರೈತರನ್ನು ಸಬಲೀಕರಣಗೊಳಿಸುವ ಮತ್ತು ಪ್ರದೇಶದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.