ಡ್ರೋನ್ ಸೇವಾ ವಲಯ ಅಗಾಧವಾದ ಭರವಸೆ ಮೂಡಿಸಿದೆ. ಇದು ಮುಂದಿನ ನಾಲ್ಕೈದು ವರ್ಷಗಳಲ್ಲಿ 1 ಲಕ್ಷ ಉದ್ಯೋಗಗಳನ್ನು ಒದಗಿಸಲಿದೆ ಎಂದು ನಾಗರಿಕ ವಾಯು ಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಶುಕ್ರವಾರ ಹೇಳಿದ್ದಾರೆ.
ಡ್ರೋನ್ ಸೇವಾ ವಲಯ ಅಗಾಧವಾದ ಭರವಸೆ ಮೂಡಿಸಿದೆ. ಇದು ಮುಂದಿನ ನಾಲ್ಕೈದು ವರ್ಷಗಳಲ್ಲಿ 1 ಲಕ್ಷ ಉದ್ಯೋಗಗಳನ್ನು ಒದಗಿಸಲಿದೆ ಎಂದು ನಾಗರಿಕ ವಾಯು ಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಶುಕ್ರವಾರ ಹೇಳಿದ್ದಾರೆ.
ಡ್ರೋನ್ ವಲಯದಲ್ಲಿ ಉತ್ಪಾದಕತೆ ಸಂಬಂಧ ಹೊಂದಿದ ಯೋಜನೆಯನ್ನು ನಾವು ಎದುರು ನೋಡುತ್ತಿದ್ದೇವೆ.
ಡ್ರೋನ್ ಉತ್ಪಾದನಾ ವಲಯದಲ್ಲಿ ಸರಿಸುಮಾರು 5,000 ಕೋಟಿ ರೂಪಾಯಿ ಹೂಡಿಕೆ ವಿಸ್ತರಿಸಲು ನಾವು ಎದುರು ನೋಡುತ್ತಿದ್ದೇವೆ. ಅಲ್ಲದೆ, ಈ ವಲಯ ಮುಂದಿನ ನಾಲ್ಕೈದು ವರ್ಷಗಳಲ್ಲಿ 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಅವರು ಹೇಳಿದರು. ಉತ್ಪಾದನೆ ಸಂಬಂಧ ಹೊಂದಿದ ಉತ್ತೇಜಕ ಯೋಜನೆಯಲ್ಲಿ ಫಲಾನುಭವಿಗಳಾಗಿ ಆಯ್ಕೆ ಮಾಡಲಾದ 14 ಡ್ರೋನ್ ಕಂಪೆನಿಗಳ ಹೆಸನ್ನು ಸಚಿವಾಲಯ ಬಿಡುಗಡೆಗೊಳಿಸಿದೆ.